
ಬೆಂಗಳೂರು : ಮಾಜಿ ಸಚಿವರಿಗೆ ಹನಿಟ್ರಾಪ್ ಮಾಡಿದ ಆರೋಪದಲ್ಲಿ ನಲಪಾಡ್ ಬ್ರಿಗೇಡ್ ಆಧ್ಯಕ್ಷೆಯನ್ನ ಕಲಬುರಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಕಲಬುರಗಿಯ ಸಿಸಿಬಿ ಪೊಲೀಸರು ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಮಂಜುಳಾಳನ್ನ ಹನಿ ಟ್ರ್ಯಾಪ್ ಆರೋಪದ ಮೇಲೆ ಬಂಧಿಸಿದ್ದಾರೆ.
ಈಕೆ ಮೊದಲಿಗೆ ವಾಟ್ಸ್ ಆಪ್ ನಲ್ಲಿ ಸೆಕ್ಸ್ ಚಾಟ್ ಆರಂಭ ಮಾಡಿ ಹಾಗೆ ಸಲುಗೆ ಬೆಳೆಸಿಕೊಂಡು ನಂತರ ವಿಡಿಯೋ ಕಾಲ್ ಮಾಡಲು ಆರಂಭಿಸಿದ್ದಳಂತೆ. ಈ ವೇಳೆ ಖಾಸಗಿ ಕ್ಷಣಗಳನ್ನ ವಿಡಿಯೋ ಚಿತ್ರಿಕರಿಸಿಕೊಂಡು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದರೆ.ನನ್ನ ಬಳಿ ನಿಮ್ಮ ವಿಡಿಯೋ ಇದೆ. 20 ಲಕ್ಷ ಕೊಡದಿದ್ರೆ ವಿಡಿಯೋ ವೈರಲ್ ಮಾಡೋದಾಗಿ ಬ್ಲ್ಯಾಕ್ಮೇಲ್ ಮಾಡಿದ್ದಾಳೆ ಎಂದು ಮಾಜಿ ಸಚಿವರ ಪುತ್ರ ಸಿಸಿಬಿಗೆ ದೂರು ನೀಡಿದ್ದಾರೆ.
ಈ ನಂತರ 20 ಲಕ್ಷ ನೀಡುವುದಾಗಿ ಈಕೆಯನ್ನು ಕರೆಸಿ, ಹಣ ಪಡೆಯಲು ಬೆಂಗಳೂರಿಗೆ ಬಂದಾಗ ಮಂಜುಳಾರನ್ನ ಸಿಸಿಬಿ ಪೊಲಿಸ್ರು ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಿದ್ದಾರೆ.
