
ಪುತ್ತೂರು : ಮುಕ್ರುಂಪಾಡಿಯಲ್ಲಿ ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಒಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಪುತ್ತೂರು ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಸಂತೋಷ್ ಶೆಟ್ಟಿ ಮತ್ತು ಕಾಸರಗೋಡಿನ ಉದಯ ಎಂಬವರ ಬೈಕ್ ಗಳು ಮಾಣಿ ಮೈಸೂರು ಹೈವೇಯ ಪುತ್ತೂರಿನ ಮುಕ್ರುಂಪಾಡಿಯಲ್ಲಿ ಅ 28 ರಾತ್ರಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಇಬ್ಬರಿಗೂ ಗಾಯವಾಗಿದೆ. ಓರ್ವರು ಗಂಭೀರ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡವರನ್ನು ಕೂಡಲೇ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಹಾವೀರ ಆಸ್ಪತ್ರೆಗೆ ತನ್ನ ಕಾರಿನಲ್ಲೇ ಸಾಗಿಸಿದ್ದಾರೆ.






