ಚಿಕ್ಕಪ್ಪ ಎಂದು ಪರಿಚಯಿಸಿದ ವ್ಯಕ್ತಿಯ ಜೊತೆ 13 ವರ್ಷದಿಂದ ಪ್ರೀತಿಸುತ್ತಿದ್ದ ಪ್ರೇಯಸಿ ಅಶ್ಲೀಲ ಭಂಗಿಯಲ್ಲಿ ನೋಡಿದ ಪ್ರಿಯಕರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಮಲಾಪುರ ತಾಲೂಕಿನ ಮಡಕಿ ಗ್ರಾಮದ ನಿವಾಸಿ ದೇವೇಂದ್ರಪ್ಪ ಕಲಕೇರಿ (32) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೇವೇಂದ್ರಪ್ಪ ಪ್ರೀತಿಸಿದ್ದ ಗ್ರಾಮದ ಯುವತಿಯನ್ನು 4 ವರ್ಷದ ಹಿಂದೆ ಬೇರೊಬ್ಬನೊಂದಿಗೆ ಮದುವೆಯಾಗಿ ಬೆಂಗಳೂರಿನ (Bengaluru) ಕೊಡಿಗೇಹಳ್ಳಿಯಲ್ಲಿ ವಾಸವಾಗಿದ್ದಳು.

ಚಿಕ್ಕಪ್ಪ ಹಾಗೂ ಗಂಡನ ಜೊತೆ ವಾಸವಾಗಿರುವುದಾಗಿ ಆಗಾಗ ದೇವೇಂದ್ರನಿಗೆ ಫೋನ್ ಮಾಡಿ ಹೇಳಿಕೊಂಡಿದ್ದ ಯುವತಿ ತನ್ನನ್ನು ಮದುವೆ ಆಗದೆ ಹೋದರೆ ಜೀವ ಕಳೆದುಕೊಳ್ಳುವುದಾಗಿ ದುಂಬಾಲು ಬೀಳುತ್ತಿದ್ದಳು.

ಮದುವೆ ಆದರೂ ನನ್ನನ್ನೇ ಪ್ರೀತಿಸುತ್ತಿದ್ದಾಳೆ ಎಂದು ಭಾವಿಸಿದ ದೇವೇಂದ್ರಪ್ಪ ಯುವತಿಯನ್ನು ಭೇಟಿಯಾಗಲು ಏಕಾಏಕಿ ಬೆಂಗಳೂರಿಗೆ ತೆರಳಿದ್ದ. ಮನೆಗೆ ಹೋದಾಗ ಆಕೆ ಇದುವರೆಗೂ ಚಿಕ್ಕಪ್ಪ ಎಂದು ಪರಿಚಯಿಸಿದ ವ್ಯಕ್ತಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯ ನೋಡಿ ಆಘಾತಕ್ಕೆ ಒಳಗಾದ.
ನಂತರ ನಡೆದ ಮಾತಿನ ಚಕಮಕಿ ವೇಳೆ ಆ ವ್ಯಕ್ತಿಗೆ ದೇವೇಂದ್ರಪ್ಪ ಚಾಕು ಇರಿದಿದ್ದು, ಸ್ಥಳದಲ್ಲಿದ್ದ ಕೆಲವರು  ಹಲ್ಲೆ ಮಾಡಿದ್ದಾರೆ. ಇದರಿಂದ ಬೇಸತ್ತ ದೇವೇಂದ್ರಪ್ಪ ಕಲಬುರಗಿಗೆ ಮರಳಿದ್ದಾನೆ.

ಈ ಮಧ್ಯೆ ಮತ್ತೆ ಯುವತಿ ಕರೆ ಮಾಡಿದ ಯುವತಿಗೆ ಸುಳ್ಳು ಹೇಳಿ ಬೇರೋಬ್ಬನ ಜೊತೆ ಸಂಬಂಧ ಹೊಂದಿದ್ದಿಯಾ. ನಾನು ಬೇರೆ ಮದುವೆ ಆಗುತ್ತೇನೆ ಎಂದು ಹೇಳಿದ್ದಾನೆ. ಆಗ ಆಕೆ ಬೇರೆ ಮದುವೆ ಆದರೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾಳೆ.

ಚಾಕು ಇರಿತ ಕೇಸ್ ಸಂಬಂಧ ಕೊಡಿಗೇಹಳ್ಳಿ ಪೊಲೀಸರು ದೇವೇಂದ್ರಪ್ಪನನ್ನು ಹುಡುಕಿಕೊಂಡು ಹೋದಾಗ ದೇವೇಂದ್ರಪ್ಪ ಹೆದರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ನಡೆದ ಎಲ್ಲಾ ಘಟನೆಯನ್ನು ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!