ರಾ ಜಸ್ಥಾನದ ಸಿರೋಹಿ ಜಿಲ್ಲೆಯ ಅಬು ರೋಡ್ ಪಟ್ಟಣದಲ್ಲಿರುವ ಎರಡು ಸ್ಪಾ ಕೇಂದ್ರಗಳ ಮೇಲೆ ಪೊಲೀಸರು ದಾಳಿ ನಡೆಸಿ 9 ಜನರನ್ನು ಬಂಧಿಸಿದ್ದಾರೆ. ಈ ವೇಳೆ 8 ಯುವತಿಯರು ಹಾಗೂ ಓರ್ವ ಯುವಕನನ್ನು ಬಂಧಿಸಲಾಗಿದೆ.

ನದಿಯ ತಪ್ಪಲಿನಲ್ಲಿರುವ ಎರಡು ಸ್ಪಾ ಕೇಂದ್ರಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಇದರಲ್ಲಿ ಒಂದು ಸ್ಪಾದಿಂದ ಹುಡುಗರು ಮತ್ತು ಹುಡುಗಿಯರನ್ನು ಬಂಧಿಸಲಾಯಿತು.

ಬಂಧಿತ ಆರೋಪಿಗಳು ಗಾಜಿಯಾಬಾದ್, ಪಂಜಾಬ್, ಜೈಪುರ, ಯುಪಿ, ಮುಂಬೈ, ಛತ್ತೀಸ್‌ಗಢ ಮತ್ತು ಕೋಲ್ಕತ್ತಾ ನಿವಾಸಿಗಳು ಎಂದು ಹೇಳಲಾಗಿದೆ. ದಾಳಿ ವೇಳೆ ಒಬ್ಬ ಹುಡುಗನೊಂದಿಗೆ ಎಂಟು ಹುಡುಗಿಯರು ಕೋಣೆಯಲ್ಲಿದ್ದು, ಪೊಲೀಸರು ಬಂದಾಗ ಒಳಗಿದ್ದ ದೃಶ್ಯ ಮುಜುಗರ ಹುಟ್ಟಿಸುವಂತಿತ್ತು.

ಸಿರೋಹಿ ರಾಜಸ್ಥಾನದ ಅತ್ಯಂತ ಚಿಕ್ಕ ಜಿಲ್ಲೆ ಎಂಬುದು ಗಮನಾರ್ಹ. ಆದರೆ ಈಗ ಅಲ್ಲಿಯೂ ವೇಶ್ಯಾವಾಟಿಕೆ ನಡೆಸುವ ಸ್ಪಾ ಸೆಂಟರ್‌ಗಳು ತೆರೆದಿವೆ. ಎರಡ್ಮೂರು ತಿಂಗಳ ಪ್ಯಾಕೇಜ್ ಹೆಸರಲ್ಲಿ ಆರೋಪಿಗಳು, ಹುಡುಗಿಯರನ್ನು ಸ್ಪಾ ಸೆಂಟರ್ ಗೆ ಕರೆಯುತ್ತಾರೆ. ಈ ಹುಡುಗಿಯರು ಬೇರೆ ಬೇರೆ ರಾಜ್ಯದವರು ಮಾತ್ರವಲ್ಲದೇ ಥಾಯ್ಲೆಂಡ್, ನೇಪಾಳದಂತಹ ದೇಶಗಳಿಂದ ಸಹ ಹುಡುಗಿಯರನ್ನು ಕರೆ ತಂದು ಅವರಿಗೆ ಹೆಚ್ಚಿನ ಹಣವನ್ನು ನೀಡಲಾಗುತ್ತದೆ ಜೊತೆಗೆ ಗ್ರಾಹಕರಿಂದ ಹೆಚ್ಚಿನ ಹಣವನ್ನು ಸಹ ತೆಗೆದುಕೊಳ್ಳಲಾಗುತ್ತದೆ.

ಸಾಮಾನ್ಯ ಮಸಾಜ್ ಸಮಯದಲ್ಲಿ ಯುವತಿಯರು ಈ ವಿಶೇಷ ಮಸಾಜ್ ಬಗ್ಗೆ ಮಾತನಾಡುತ್ತಿದ್ದು, ಯುವಕನಿಗೆ ಅರ್ಥವಾದಾಗ ಅವನನ್ನು ಬೇರೆ ಕೋಣೆಗೆ ಕರೆದೊಯ್ಯಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!