ಅವರಿಬ್ಬರು ಕುಚುಕು ಗೆಳೆಯರು, ದಿನಾ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಇಬ್ಬರೂ ಮದುವೆಯಾಗಿ ಮಕ್ಕಳಿರುವ ಮಹಿಳೆ ಹಿಂದೆ ಬಿದ್ದಿದ್ದರು. ಇದರಿಂದ ಸಿಟ್ಟಿಗೆದ್ದ ಓರ್ವ ತನ್ನ ಗೆಳೆಯನನ್ನೆ ಕಂಠ ಪೂರ್ತಿ ಕುಡಿಸಿ ಹಗ್ಗದಿಂದ ಆತನ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ.
ಇನ್ನೂ ಕೊಲೆ ಮಾಡುವದನ್ನು ಸಹಿತ ತನ್ನ ಮುಬೈಲ್ ರೆಕಾರ್ಡ್ ಮಾಡಿಕೊಂಡಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡಾ ಆಗಿದೆ. ಹಾಗಾದರೆ ಈ ಘಟನೆ ನಡೆದಿದ್ದಾದರೂ ಎಲ್ಲಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್…
ಪ್ರೀತಿ ಮಾಯೆ ಹುಷಾರೋ ಎಂಬ ಹಾಡಿನಂತಿದೆ ಇವತ್ತು ನಾವು ಹೇಳಲು ಹೊರಟಿರುವ ಪ್ರೇಮ ಪ್ರಕರಣ. ಪ್ರೀತಿಯಲ್ಲಿ ಬಿದ್ದ ಇಬ್ಬರ ಪೈಕಿ ಓರ್ವ ಸಾವನಪ್ಪಿದರೆ ಇನ್ನೊರ್ವ ಜೈಲು ಸೇರುವಂತಾಗಿದೆ.ಹೌದು ಅಂಟಿ ಹಿಂದೆ ಬಿದ್ದ ಇಬ್ಬರು ಕುಚುಕು ಗೆಳೆಯರು, ಓರ್ವ ಗೆಳಯನನ್ನು ಇನ್ನೊರ್ವ ಅಂಟಿಗಾಗಿ ಕುತ್ತಿಗೆ ಹಿಚುಕಿ ಕೊಲೆ ಮಾಡಿದ್ದಾನೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಎಂಪಿಎಂಸಿ ಹೊರ ಭಾಗದಲ್ಲಿ ನಿನ್ನೆ ನಡೆದಿದ್ದ ಸುನೀಲ್ ಭಜಂತ್ರಿ ಕೊಲೆ ಭಯಾನಕ ವಿಡಿಯೋ ವೈರಲ್ ಆಗಿವೆ.
ಅನೈತಿಕ ಸಂಬಂದಕ್ಕೆ ಸ್ನೇಹಿತರೆ ಕೊಲೆ ಮಾಡಿದ್ದಾರೆ. ರವಿವಾರ ಮದ್ಯಾಹ್ನ ಕೊಲೆಯಾದ ಸುನೀಲ್ ಭಜಂತ್ರೀ (23) ಹಾಗೂ ಆತನ ಸ್ನೇಹಿತ ಸಂತೋಷ ಹಾಗೂ ಮುದುಕಪ್ಪ ಎನ್ನುವವರು ಬಸವನ ಬಾಗೇವಾಡಿ ಪಟ್ಟಣದ ಬಾರ್ ನಲ್ಲಿ ಕಂಠ ಪೂರ್ತಿ ಕುಡಿದಿದ್ದಾರೆ. ಬಳಿಕ ಅಲ್ಲೇ ದೂರದಲ್ಲಿರುವ ಹೊಲದಲ್ಲಿ ಮೇವು ತರೋಣ ಬಾ ಎಂದು ಸುನೀಲ್ ನನ್ನ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿ ಮತ್ತೆ ಮದ್ಯ ಸೇವನೆ ಮಾಡಿದ್ದಾರೆ. ಈ ವೇಳೆ ಅನೈತಿಕ ಸಂಬಂಧದ ವಿಚಾರ ಪ್ರಸ್ತಾಪವಾಗಿದೆ. ಸುನಿಲ್ ಹಾಗೂ ಸಂತೋಷ ಇಬ್ಬರು ಕೂಡಾ ಒಬ್ಬಳ ಜೊತೆಯೇ ಅನೈತಿಕ ಸಂಬಂಧ ಹೊಂದಿದ್ದರು.
ಈ ವಿಚಾರದಲ್ಲಿ ಇಬ್ಬರ ನಡುವೆ ಆಗಾಗಾ ಗಲಾಟೆ ನಡೆಯುತ್ತಿತ್ತು. ಮೊನ್ನೆಯೂ ಕೂಡಾ ನೀನು ಅವಳನ್ನು ಬಿಡು ಎಂದು ಸುನೀಲ್ ಗೆ ಸಂತೋಷ ಎಚ್ಚರಿಕೆ ನೀಡಿದ್ದಾರೆ. ಆದರೆ ಸಂತೋಷ ನೀಡಿದ ಎಚ್ಚರಿಕೆಗೆ ಸುನೀಲ್ ಡೋಂಟ್ ಕೇರ್ ಎಂದಿದ್ದಾರೆ. ಇದರಿಂದ
ಆಕ್ರೋಶಗೊಂಡ ಸಂತೋಷ ಹಗ್ಗದಿಂದ ಸುನೀಲ್ ಕುತ್ತಿಗೆ ಬಿಗಿದು ಬಳಿಕ ಕುತ್ತಿಗೆ ಮೇಲೆ ಕಾಲಿಟ್ಟು ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕೊಲೆ ಮಾಡಿದನ್ನ ವಿಡಿಯೋ ಕೂಡಾ ಮಾಡಿಕೊಂಡಿದ್ದಾನೆ. ಸದ್ಯ ಪೊಲೀಸರು ಸಂತೋಷ ಹಾಗೂ ಮುದುಕಪ್ಪನ್ನನ್ನು ವಶಕ್ಕೆ ಪಡೆದಿದ್ದಾರೆ.
ಬಸವನ ಬಾಗೇವಾಡಿ ಪಟ್ಟಣದಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಸುನೀಲ್ ಹಾಗೂ ಸಂತೋಷ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಇಬ್ಬರು ಕೂಡ ಆಕೆಯ ಜೊತೆ ಸುತ್ತಾಡುತ್ತಿದ್ದರು. ಆದರೆ ಇತ್ತೀಚಿಗೆ ಆಕೆಯ ವಿಚಾರದಲ್ಲಿ ಗಲಾಟೆಯಾಗಿತ್ತು. ಹೀಗಾಗಿ ಸುನೀಲ್ ನನ್ನು ಮುಗಿಸಬೇಕು ಎಂದು ನಿರ್ಧಾರ ಮಾಡಿದ್ದ ಸಂತೋಷ, ಬಾರ್ ನಲ್ಲಿ ಕುಡಿದ ಬಳಿಕ ಮೇವು ತರುವ ನೆಪದಲ್ಲಿ ಹೊಲಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಗೆ ಮದುವೆಯಾಗಿ ಮಕ್ಕಳಿದ್ದರೂ ಕೂಡಾ ಈ ಇಬ್ಬರೂ ಆಟೋ ಡ್ರೈವರ್ ಗಳ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು.
ಸದ್ಯ ಪೊಲೀಸರು ಘಟನೆಗೆ ಬೇರೆ ಯಾರೆಲ್ಲ ಸಹಕಾರ ನೀಡಿದ್ದಾರೆ ಅನ್ನೋದನ್ನ ತನಿಖೆ ಮಾಡುತ್ತಿದ್ದಾರೆ.. ಕುಚುಕು ಗೆಳೆಯರಾಗಿದ್ದ ಇಬ್ಬರು ಓರ್ವ ಮಹಿಳೆಗಾಗಿ ಗಲಾಟೆ ಮಾಡಿಕೊಂಡಿದ್ದಾರೆ. ಓರ್ವ ಬೀದಿ ಹೆಣವಾಗಿದ್ದಾನೆ. ಮತ್ತೋರ್ವ ಕಂಬಿ ಎಣಿಸುವಂತಾಗಿದೆ. ಇನ್ನೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೋಲಿಸರು ಇನ್ನೂ ತನಿಖೆ ಮುಂದುವರೆಸಿದ್ದಾರೆ. ಪ್ರೀತಿ ಮಾಯೆ ಹುಷಾರೋ ಎಂಬಂತೆ ಹಾಡಿನಂತೆ, ಪ್ರೀತಿಯಲ್ಲಿ ಬಿದ್ದ ಇರ್ವರಲ್ಲಿ ಓರ್ವ ಹೆಣವಾಗಿ ಹೋದರೆ ಇನ್ನೊರ್ವ ಜೈಲು ಸೇರುವಂತಾಗಿದೆ.