
ಮಹಿಳೆಯೊಬ್ಬಳು ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸೆಬ್ಬೇನಹಳ್ಳಿಯಲ್ಲಿ ನಡೆದಿದೆ.
ಪೂಜಾ (25) ಮೃತ ಮಹಿಳೆ. ಗ್ರಾಮದ ಹೊಂಡದಲ್ಲಿ ಪೂಜಾ ಶವ ಪತ್ತೆ ಆಗಿದೆ. ಕೌಟುಂಬಿಕ ಕಲಹ ಹಿನ್ನೆಲೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ.
ಪತಿ ಓಂಕಾರ್ ಹಾಗೂ ಆತನ ಅಣ್ಣ ರಾಜಣ್ಣ ಸೇರಿ ಪೂಜಾಳಿಗೆ ಕಿರುಕುಳ ನೀಡುತ್ತಿದ್ದರು ಇದರಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪ ಕೇಳಿಬಂದಿದೆ.
ಅದೇ ರೀತಿ ಕಳೆದ ನಾಲ್ಕು ದಿನಗಳ ಹಿಂದೆ ಪೂಜಾಳನ್ನು ರಾಜಣ್ಣ ಗಂಡನ ಮನೆಗೆ ಕರೆದೊಯ್ದಿದ್ದ. ಅದಾದ ಎರಡು ದಿನಗಳಿಂದ ಪೂಜಾ ನಾಪತ್ತೆಯಾಗಿದ್ದಳು. ಇಂದು ಸೆಬ್ಬೇನಹಳ್ಳಿಯ ಹೊಂಡದಲ್ಲಿ ಪೂಜಾ ಶವ ಪತ್ತೆಯಾಗಿದ್ದಾಳೆ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಂದನಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






