
ಪುತ್ತೂರು: ಎಲೆಕ್ಟಿಕ್ ಆಟೋ ರಿಕ್ಷಾವೊಂದು ಪುತ್ತೂರಿನ ಬೈಪಾಸ್ ನಲ್ಲಿ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡ ರಿಕ್ಷಾ ಚಾಲಕ ಸೂರ್ಯ ಎಂಬವರು ಮೃತಪಟ್ಟ ಘಟನೆ ಡಿ.22 ರಂದು ಬೆಳಗ್ಗೆ ನಡೆದಿದೆ
ಬೈಪಾಸ್ ರಸ್ತೆ ತೆಂಕಿಲದಲ್ಲಿ ಚಾಲಕ ಸೂರ್ಯ ಅವರು ಚಲಾಯಿಸುತ್ತಿದ್ದ ರಿಕ್ಷಾಕ್ಕೆ ನಾಯಿ ಯೊಂದು ಅಡ್ಡ ಬಂದಿದೆ ಎನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ರಿಕ್ಷಾ ಪಲ್ಟಿಯಾಗಿದೆ. ಕೂಡಲೇ ರಿಕ್ಷಾದಲ್ಲಿದ್ದ ಇಬ್ಬರು ಪ್ರಯಾಣಿಕ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಚಾಲಕ ಸೂರ್ಯ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದರು.
ಚಿಕಿತ್ಸೆಗೆ ಸ್ಪಂಧಿಸದೆ ಅಲ್ಲಿ ಅವರು ಮೃತಪಟ್ಟಿದ್ದಾರೆ.
ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ






