ಪುತ್ತೂರು : ಬಿಜೆಪಿ ಪ್ರತಿಭಟನೆಯ ವೇಳೆ ಪುತ್ತೂರಿನಲ್ಲಿ ಪೋಲಿಸರನ್ನು ಅವಾಚ್ಯ ಶಬ್ದಗಳಿಂದ ಬೈದು , ಮೈ ಮೇಲೆ ಕೈಯನ್ನು ಹಾಕಿ ಹಲ್ಲೆಗೆ ಮುಂದಾದ ಮಾಜಿ ಶಾಸಕ ಬಿಜೆಪಿ ಮುಖಂಡ ಸಂಜೀವ ಮಠಂದೂರುರವರ ಮೇಲೆ ಪೋಲಿಸ್  ಇಲಾಖೆ ಯಾಕಾಗಿ ಎಫ್.ಐ.ಆರ್ ದಾಖಲಿಸಿ ಬಂಧಿಸಿಲ್ಲ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು ಪ್ರಶ್ನಿಸಿದ್ದಾರೆ.
   ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಠಿಸಿ, ಗೂಂಡಾಗಿರಿಯನ್ನು ಬಿಜೆಪಿ ಮುಖಂಡರು ಮಾಡುತ್ತಿದ್ದು ಮುಂದುವರೆದು ಇದೀಗ ಪೋಲಿಸರ ಮೇಲೆಯೇ ತಮ್ಮ ದರ್ಪವನ್ನು ತೋರಿಸುವ ಮಟ್ಟಕ್ಕೆ ಬೆಳೆದು, ಪೋಲಿಸರ ಮೇಲೆಯೇ ಹಲ್ಲೆಗೆ ಮುಂದಾದವರು ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳದೆ ಮೌನ ವಹಿಸುವುದರ ಹಿಂದಿನ ಮರ್ಮವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಒಂದು ವೇಳೆ ಇತರ ಪಕ್ಷದವರು ಅಥವಾ ಆಡಳಿತ ಪಕ್ಷದ ಕಾರ್ಯಕರ್ತರೇ  ಈ ರೀತಿಯಾಗಿ ವರ್ತಿಸಿದ್ದರೆ ಪೋಲಿಸ್ ಇಲಾಖೆ ಸುಮ್ಮನಿರುತ್ತಿತ್ತೆ,ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿದ್ದ ಮಾಜಿ ಶಾಸಕರೇ ಗೂಂಡಾಗಿರಿಗೆ ಇಳಿದು ಪೋಲಿಸರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಅವರ ಸಂಸ್ಕೃತಿಯನ್ನು ತೋರ್ಪಡಿಸುತ್ತಿದೆ ಎಂದು ಹೇಳಿದ್ದಾರೆ.
       ಪೋಲಿಸ್ ಇಲಾಖೆ ಕೂಡಲೇ ಮಾಜಿ ಶಾಸಕ ಮಠಂದೂರು ಹಾಗೂ ಪ್ರತಿಭಟನೆಯ ಆಯೋಜಕರ ಮೇಲೆ FIR ದಾಖಲಿಸಿ ಬಂಧಿಸಬೇಕೆಂದು  ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!