Category: ಕರಾವಳಿ

BREAKING : ಕಾಂತಾರ ಚಾಪ್ಟರ್ 1′ ಸೆಟ್ನಲ್ಲಿ ಮತ್ತೊಂದು ಭಾರಿ ಅವಘಡ..!!!

ಕಾಂತಾರ ಚಾಪ್ಟರ್-1 ಸಿನಿಮಾ ಶೂಟಿಂಗ್ ಆರಂಭದಿಂದಲೂ ಒಂದಲ್ಲ ಒಂದು ಸುದ್ದಿಯಲ್ಲಿದೆ. ಇದೀಗ ಶೂಟಿಂಗ್ ವೇಳೆ ಮತ್ತೊಂದು ಅವಘಡ ಶನಿವಾರ ಸಂಭವಿಸಿದೆ. ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನ ಮಾಡುತ್ತಿರುವ ಕಾಂತಾರ-1 ಚಿತ್ರದ ಶೂಟಿಂಗ್ ವೇಳೆ ಜಲಾಶಯದಲ್ಲಿ ದೋಣಿ ಮಗುಚಿದ ಘಟನೆ ನಡೆದಿದೆ…

ಮಂಗಳೂರಿನಲ್ಲಿ ಭಾರಿ ಮಳೆ : ನಡು ರಸ್ತೆಯಲ್ಲೆ ಕೆಟ್ಟು ನಿಂತ ಬಸ್, ವಾಹನ ಸವಾರರ ಪರದಾಟ!

ನಗರದಲ್ಲಿ ಕಳೆದ ಕೆಲ ಗಂಟೆಯಿಂದ ಭಾರೀ ಮಳೆಯಾಗುತ್ತಿದ್ದು, ಪಂಪ್‌ವೆಲ್ ವೃತ್ತವು ಮತ್ತೆ ಮುಳುಗಡೆಯಾಗಿದೆ. ಭಾರೀ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಇನ್ನು ರಸ್ತೆಯಲ್ಲಿ ನಿಂತ ನೀರಿನಿಂದ ಬಸ್ಸೊಂದು ಕೆಟ್ಟು ನಿಂತಿದ್ದು, ಸಾರ್ವಜನಿಕರು ಬಸ್ಸನ್ನು ರಸ್ತೆ ಬದಿಗೆ ತಳ್ಳಿದ್ದಾರೆ.…

LANDSLIDE : ಮಂಗಳೂರಿನ ಹೆದ್ದಾರಿಯಲ್ಲಿ ಗುಡ್ಡ ಕುಸಿತ – ವಾಹನ ಸಂಚಾರ ಬಂದ್‌

ದ ಕ್ಷಿಣ ಕನ್ನಡದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದು, ಇದೀಗ ವಾಮಂಜೂರು ಸಮೀಪದ ಕತ್ತಿಕಲ್ ನ ಮಂಗಳೂರು – ಮೂಡಬಿದ್ರೆ – ಕಾರ್ಕಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ರ ರಸ್ತೆ ಅಭಿವೃದ್ಧಿಗಾಗಿ ಕಾಮಗಾರಿ ನಡೆದ ಸ್ಥಳದಲ್ಲಿ ಗುಡ್ಡ…

ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿದ ಗೃಹ ಸಚಿವ ಡಾ.ಪರಮೇಶ್ವರ್-ಮಾದಕ ವಸ್ತುಗಳ ಜಾಲವನ್ನು ಸಂಪೂರ್ಣವಾಗಿ ಮಟ್ಟ ಹಾಕುವ ನಿಟ್ಟಿನಲ್ಲಿ, ದಂಧೆಕೋರರ ಚಲನವಲನಗಳ ಮೇಲೆ ತೀವ್ರ ನಿಗಾವಹಿಸಿ…!!

ಮಂಗಳೂರು :ನಗರ ಪೊಲೀಸ್ ಹಾಗೂ ಪಶ್ಚಿಮ ವಲಯದ ನಾಲ್ಕು ಜಿಲ್ಲೆಗಳ ಕಾನೂನು ಮತ್ತು ಸುವ್ಯವಸ್ಥೆಯ ಕುರಿತಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ರಾಜ್ಯ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಕೆಲವು ಕಟ್ಟುನಿಟ್ಟಿನ ಕ್ರಮ ವಹಿಸಿವಂತೆ…

ಮಂಗಳೂರು ವಿಮಾನ ನಿಲ್ದಾಣದ ರನ್‌ವೇ  ಜಾಗ ಖರೀದಿಗೆ ರೂ.50 ಕೋಟಿ- ಅದಾನಿ ಗ್ರೂಪ್ ಒಪ್ಪಿಗೆ

ಶಾಸಕ ಅಶೋಕ್ ರೈಯವರ ಅಧಿವೇಶನದ ಪ್ರಸ್ತಾಪ ಫಲಪ್ರದ

ಪುತ್ತೂರು: 15 ವರ್ಷಗಳ ಹಿಂದೆ ವಿಮಾನವು ರನ್ ವೇ ದಾಟಿ ಕಾಂಪೌಂಡ್ ಸೀಳಿ ಕೆಳಗಿನ ಕಣಿವೆಗೆ ಬಿದ್ದಿರುವ ದುರಂತ ಘಟನೆಯ ಮಂಗಳೂರು ಬಟ್ಟೆ ವಿಮಾನ ನಿಲ್ದಾಣದಲ್ಲಿದ್ದ ರನ್ ವೇ ಬಹಳ ಅಪಾಯಕಾರಿ.ಟೇಬಲ್ ಟಾಪ್ ವಿನ್ಯಾಸದ್ದಾಗಿದ್ದು ಇಲ್ಲಿಯ ರನ್ ವೇಗಳಲ್ಲಿ ವಿಮಾನ ಇಳಿಸುವುದು…

PLANE CRASH : 15 ವರ್ಷದ ಹಿಂದೆ ಮಂಗಳೂರಲ್ಲಿ ವಿಮಾನ ದುರಂತ, ಕೊನೆಗೂ ಆ 12 ಜನರ ಗುರುತು ಪತ್ತೆಯಾಗಲೇ ಇಲ್ಲ!

ಅಹಮದಾಬಾದ್ನಲ್ಲಿ ನಡೆದ ಭೀಕರ ವಿಮಾನ ದುರಂತಕ್ಕೆ ದೇಶವೇ ಬೆಚ್ಚಿಬಿದ್ದಿದೆ. ಇದರ ಬೆನ್ನಲ್ಲೇ 15 ವರ್ಷಗಳ ಹಿಂದೆ ಅಂದ್ರೆ 2010ರ ಮೇ 22 ರಂದು ಮಂಗಳೂರಿನಲ್ಲಿ ನಡೆದ ಏರ್ ಇಂಡಿಯಾ ಎಕ್ಸ್ಪ್ರೆಸ್ ಫ್ಲೈಟ್ 812 ವಿಮಾನ ದುರಂತವನ್ನು ನೆನಪಿಸಿದೆ. ಈ ದುರಂತದಲ್ಲಿ ಒಟ್ಟು…

BIG NEWS: ಸ್ಪೆಷಲ್ ಆಕ್ಷನ್ ಫೋರ್ಸ್ ಗೆ ಗೃಹ ಸಚಿವ ಪರಮೇಶ್ವರ್ ಚಾಲನೆ: ಕೋಮು ನಿಗ್ರಹ ಕಾರ್ಯಪಡೆಗೆ ಸುಧೀರ್‌ಕುಮಾರ್‌ ರೆಡ್ಡಿ ಮುಖ್ಯಸ್ಥ…!!!

ಮಂಗಳೂರಿನಲ್ಲಿ(Mangaluru) ಕೋಮು ಸಂಘರ್ಷವನ್ನು ತಡೆಗಟ್ಟಲು ಹೊಸ ತಂಡವೊಂದು ರೆಡಿಯಾಗಿದೆ. ‘ಸ್ಪೆಷಲ್ ಆಯಕ್ಷನ್ ಫೋರ್ಸ್’ (Special Action Force)ಇಂದು ಅಸ್ತಿತ್ವಕ್ಕೆ ಬಂದಿದೆ. ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ನೂತನ ಸ್ಟ್ರೈಕಿಂಗ್ ಫೋರ್ಸ್ಗೆ ಚಾಲನೆ ನೀಡಿದರು.…

ಪಾಣೆಮಂಗಳೂರು: ಹಳೆ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧ

ಇಲ್ಲಿನ ಪಾಣೆಮಂಗಳೂರು ಪೇಟೆ ಮತ್ತು ಬಿ.ಸಿ.ರೋಡು ಸಂಪರ್ಕಿಸಲು ಬ್ರಿಟೀಷರ ಆಡಳಿತಾವಧಿಯಲ್ಲಿ ನೇತ್ರಾವತಿ ನದಿಗೆ ಅಡ್ಡವಾಗಿ ನಿರ್ಮಿಸಿದ್ದ ಹಳೆ ಸೇತುವೆ ಮೇಲೆ ಎಲ್ಲಾ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ತಹಸೀಲ್ದಾರ್ ಡಿ.ಅರ್ಚನಾ ಭಟ್ ಆದೇಶ ಹೊರಡಿಸಿದ್ದಾರೆ. ಈ ಶಿಥಿಲಾವಸ್ಥೆಯಲ್ಲಿರುವ ಹಳೆ ಸೇತುವೆಯಲ್ಲಿ ಕೆಲವೆಡೆ…

ಜೂ.12:ಡಾ.ನಝೀರ್ ಅಹಮ್ಮದ್ ಕ್ಲಿನಿಕ್‌ನಲ್ಲಿ ಮಾಸಿಕ ಥೈರಾಯಿಡ್ ತಪಾಸಣಾ ಶಿಬಿರ

ಪುತ್ತೂರು: ವೈದ್ಯಕೀಯ ತಜ್ಞ ಡಾ|ನಝೀರ್ ಅಹಮ್ಮದ್ ಡಯಾಬಿಟಿಸ್‌ ಸೆಂಟರ್, ರೋಟರಿ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವುಗಳ ಸಹಯೋಗದಲ್ಲಿ ಮಾಸಿಕ ಥೈರಾಯಿಡ್ ಗ್ರಂಥಿಯ ತಪಾಸಣಾ ಶಿಬಿರ, ಉಚಿತ ಶುಗರ್, HBA1C, ಕೊಲೆಸ್ಟ್ರಾಲ್, ಬಿಎಂಡಿ(ಮೂಳೆ ಸಾಂದ್ರತೆ), ನ್ಯುರೋಪಥಿ, ಕ್ಯಾಲ್ಸಿಯಂ ತಪಾಸಣೆಯು ಜೂ.12…

ಇಂದು (ಜೂನ್ 12) ದ.ಕ.ಜಿಲ್ಲೆಯ ಶಾಲೆಗಳಿಗೆ ರಜೆ

ಮಂಗಳೂರು: ಹವಾಮಾನ ಇಲಾಖೆಯು ದ.ಕ. ಜಿಲ್ಲೆಯಲ್ಲಿ ಆರೆಂಜ್ ಅಲೆರ್ಟ್ ಘೋಷಿಸಿದೆ. ಮುಂಜಾಗ್ರತಾ ಕ್ರಮವಾಗಿ ದ.ಕ. ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಖಾಸಗಿ, ಸರಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜೂನ್ 12ರಂದು ರಜೆ ಘೋಷಿಸಿ ದ.ಕ. ಜಿಲ್ಲಾಧಿಕಾರಿ ಅದೇಶ ಹೊರಡಿಸಿದ್ದಾರೆ.

Join WhatsApp Group
error: Content is protected !!