
ಪುತ್ತೂರು: ಪ್ರಗತಿ ಕಾಲೇಜ್ ಆಫ್ ಪಾರಾ ಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನಲ್ಲಿ “Beyond the Microscope” ಎಂಬ ಶೀರ್ಷಿಕೆಯಡಿಯಲ್ಲಿ ಒಂದು ವಿಶೇಷ ಮಾಹಿತಿ ಕಾರ್ಯಾಗಾರವನ್ನು ಜುಲೈ 7ರಂದು ಆಯೋಜಿಸಲಾಗಿತ್ತು. ಈ ಕಾರ್ಯಾಗಾರವನ್ನು ಸಂಸ್ಥೆಯ ಉಪನ್ಯಾಸಕಿ ಕು. ಭೂಮಿಕಾ ನಡೆಸಿಕೊಟ್ಟರು.
ಕಾರ್ಯಾಗಾರದ ಮುಖ್ಯ ಉದ್ದೇಶ, ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ (MLT) ವಿದ್ಯಾರ್ಥಿಗಳಿಗೆ ಪದವಿ ಪೂರ್ಣಗೊಳಿಸಿದ ನಂತರ ಇರುವ ಉನ್ನತ ಶಿಕ್ಷಣ, ಸ್ವ ಉದ್ಯೋಗ, ವಿದೇಶಿ ಉದ್ಯೋಗ ಹಾಗೂ ಇತರ ವೃತ್ತಿಪರ ಅವಕಾಶಗಳ ಬಗ್ಗೆ ವಿವರಿಸುವುದಾಗಿತ್ತು. ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ದಿಕ್ಕು ನಿರ್ಧರಿಸಲು ಅಗತ್ಯವಾದ ಮಾರ್ಗದರ್ಶನ ನೀಡಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಶ್ರೀಮತಿ ಪ್ರೀತಾ ಹೆಗ್ದೆ ಅವರು ಸಹ ಕಾರ್ಯಾಗಾರದ ವಿಷಯಕ್ಕೆ ಪೂರಕವಾದ ಮಾಹಿತಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಅಂತಿಮ ವರ್ಷದ ಬಿಎಸ್ಸಿ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ಮಾನಸ, ಕು. ರೇಷ್ಮಾ, ಕು. ವೃಂದಾ, ಕು. ದೀಕ್ಷಾ ಹಾಗೂ ಶ್ರೀಮತಿ ಭವ್ಯ ಉಪಸ್ಥಿತರಿದ್ದರು.






