ಪುತ್ತೂರು ತಾಲೂಕಿನ ಬೊಳುವಾರು ಪ್ರಗತಿ ಪ್ಯಾರ ಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ಸಹಯೋಗದೊಂದಿಗೆ ಮುಂಡೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ರಕ್ತ ವರ್ಗಿಕರಣ ಶಿಬಿರವನ್ನು ಆಯೋಜಿಸಲಾಗಿತು.

ಈ ಶಿಬಿರದಲ್ಲಿ ಪ್ರಗತಿ ಸಂಸ್ಥೆಯ ಉಪನ್ಯಾಸಕರಾದ ರೇಷ್ಮಾ ಕುಲಾಲ್, ಶಶಿಕುಮಾರ್, ದೀಕ್ಷಾ ಶೆಟ್ಟಿ ಮತ್ತು ಲಹರಿ ಇವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿಯ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಅಶ್ವಿತಾ, ಸುಶ್ಮಿತಾ ಮತ್ತು ಲಾವಣ್ಯ ರಕ್ತದ ವರ್ಗಿಕರಣ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಶಿಬಿರದಲ್ಲಿ ಪ್ರಗತಿ ರೋಟಾರಾಕ್ಟ್ ಕ್ಲಬ್ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡರು. ಮುಂಡೂರು ಶಾಲೆಯ ಮುಖ್ಯ ಶಿಕ್ಷಕಿ ವಿಜಯ ಅವರೊಂದಿಗೆ ಶಿಕ್ಷಕರ ವೃಂದ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ಅಂಬಟ, ಸದಸ್ಯರು ಹಾಗೂ ಮಾಜಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

Join WhatsApp Group
error: Content is protected !!