ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪುತ್ರರಾದ ಬಿ.ವೈ.ರಾಘವೇಂದ್ರ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿದರು.

ಬಳಿಕ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ವಿಚಾರಗಳ ಚರ್ಚೆ ಆಗಿದೆ ಅಂತಾ ಕಲ್ಪಿಸಬೇಡಿ.

ನಮ್ಮ ಮನೆಯಲ್ಲಿ ಕುಟುಂಬದ ಕಾರ್ಯಕ್ರಮವಿದೆ. ವಿಶೇಷವಾಗಿ ನನ್ನ ಪುತ್ರನ ಮದುವೆ ಇದೆ. ಹೀಗಾಗಿ ಡಿಕೆಶಿ ಅವರು ಭೇಟಿಗೆ ಸಮಯ ನೀಡಿದ್ದರು. ಅವರಿಗೆ ಮದುವೆಯ ಆಹ್ವಾನ ಪತ್ರಿಕೆ ನೀಡಿದ್ದು, ಬರುವುದಾಗಿ ಹೇಳಿದ್ದಾರೆ ಎಂದು ರಾಘವೇಂದ್ರ ಅವರು ಮಾಧ್ಯಮಗಳಿಗೆ ತಿಳಿಸಿದರು.

ಇನ್ನು ಐದು-ಹತ್ತು ನಿಮಿಷಗಳ ಕಾಲ ಅವರೊಂದಿಗೆ ಕುಳಿತು ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತಾಗಿ ಸಮಾಲೋಚನೆ ನಡೆಸಿದ್ದಾಗಿ ಹೇಳಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!