
ಇಲ್ಲಿನ ಕಾನ್ಸುರದ ರಸ್ತೆಯಲ್ಲಿ ದೊಡ್ಡ ಹೈಡ್ರಾಮ ನಡೆದಿದ್ದು, 21 ವರ್ಷದ ಯುವಕ ಮತ್ತು ಆತನ 19 ವರ್ಷದ ಗೆಳತಿಯನ್ನು ರಸ್ತೆಯ ಮಧ್ಯದಲ್ಲಿ ಸಾರ್ವಜನಿಕವಾಗಿ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಥಳಿಸಿದ್ದಾನೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಜೋಡಿ ತಮ್ಮ ಕುಟುಂಬಸ್ಥರ ವಿರೋಧದ ನಡುವೆಯೂ ಒಟ್ಟಾಗಿ ಸುತ್ತಾಡುವ ಕಾರಣ ಇವರ ವಿರುದ್ಧ ಈ ರೀತಿ ಆಕ್ರೋಶ ವ್ಯಕ್ತಪಡಿಸಿ ಹಲ್ಲೆ ನಡೆಸಲಾಗಿದೆ.ಈ ರೋಹಿತ್ ಮತ್ತು ಅವನ ಗೆಳತಿ ರಸ್ತೆಬದಿಯ ಅಂಗಡಿಯಲ್ಲಿ ನೂಡಲ್ಸ್ ತಿನ್ನುತ್ತಿದ್ದ ವೇಳೆ ಇದ್ದಕ್ಕಿದ್ದಂತೆ, ರೋಹಿತ್‌ನ ಪೋಷಕರಾದ ಶಿವಕರನ್ ಮತ್ತು ಸುಶೀಲಾ ತಮ್ಮ ಮಗನನ್ನ ಗೆಳತಿಯೊಂದಿಗೆ ನೋಡಿದ್ದಾರೆ.
ಹೀಗೆ ಈ ಇಬ್ಬರನ್ನು ಒಟ್ಟಿಗೆ ನೋಡಿದ ಪೋಷಕರು ಕೋಪಗೊಂಡಿದ್ದಾರೆ.ಈ ವೇಳೆ ಸುಶೀಲಾ ಸ್ಕೂಟರ್‌ನಲ್ಲಿ ಕುಳಿತಿದ್ದ ತನ್ನ ಮಗ ಮತ್ತು ಅವನ ಗೆಳತಿಯನ್ನು ಹೊಡೆಯಲು ಪ್ರಾರಂಭಿಸಿ ಹುಡುಗಿಯ ಅವಳ ಕೂದಲನ್ನು ಹಿಡಿದು ಎಳೆದಾಡಿದ್ದಾರೆ.ಹೀಗೆ ಹುಡುಗಿಯನ್ನು ನಿಂದಿಸುತ್ತಾ ನಿನ್ನಿಂದಲೇ ದುಂದು ವೆಚ್ಚ ಎಂದು ಅವಳನ್ನು ದೂಷಿಸಿದ್ದಾರೆ.
ಇನ್ನು ವೈರಲ್ ಆಗಿರುವ ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಕಾನ್ಪುರ್ ನಗರ ಪೊಲೀಸ್ ಕಮಿಷನರೇಟ್, ಈ ವಿಷಯ ಸ್ಥಳೀಯ ಪೊಲೀಸರ ಗಮನಕ್ಕೆ ಬಂದಿದ್ದು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ






