ಮಧ್ಯಪ್ರದೇಶದ ಶಾಲೆಯೊಂದರಲ್ಲಿ ಪ್ರಾಂಶುಪಾಲರು ಮತ್ತು ಲೈಬ್ರೇರಿಯನ್ ನಡುವಿನ ವಾಗ್ವಾದವು ಮಾರಾಮಾರಿಗೆ ತಿರುಗಿದ ಪ್ರಸಂಗ ನಡೆದಿದೆ.ಮಧ್ಯಪ್ರದೇಶದ ಖಾರ್ಗೋನ್‌ನ ಪ್ರಾಂಶುಪಾಲೆ ಪ್ರವೀಣ್ ದಹಿಯಾ ಮತ್ತು ಲೈಬ್ರೇರಿಯನ್ ಮಧುರಾಣಿ ನಡುವಿನ ಜಗಳದ ವಿಡಿಯೋ‌ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಮೂಲಗಳ ಪ್ರಕಾರ, ಇದಕ್ಕೂ ಮೊದಲು ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ವಿವಾದ ಉಲ್ಬಣಗೊಂಡು ಲೈಬ್ರೇರಿಯನ್‌ಗೆ ಪ್ರಿನ್ಸ್‌ಪಾಲ್‌ ಕಪಾಳಮೋಕ್ಷ ಮಾಡಿದ್ದಾರೆ. ಇಷ್ಟೇ ಅಲ್ಲ ಮಧುರಾಣಿಯವರ ಫೋನ್ ಕಸಿದುಕೊಂಡು ಪ್ರಾಂಶುಪಾಲೆ ಎಸೆದಿದ್ದಾರೆ. ಬಳಿಕ ಪದೇ ಪದೇ ಕಪಾಳಮೋಕ್ಷ ಮಾಡಿದ್ದಾರೆ

ಈ ಫೈಟಿಂಗ್‌ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜಗಳದ ಬಳಿಕ ಇಬ್ಬರೂ ಪರಸ್ಪರ ಪೊಲೀಸ್ ಠಾಣೆಯಲ್ಲಿ ದೂರುಗಳನ್ನು ದಾಖಲಿಸಿದರು. ಪೊಲೀಸರು ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಸಮಯದಲ್ಲಿ ಪ್ರಾಂಶುಪಾಲರನ್ನು ಐಸಿಯುಗೆ ದಾಖಲಿಸಲಾಯಿತು ಮತ್ತು ಗ್ರಂಥಪಾಲಕಿ ಮಧುರಾಣಿಯನ್ನೂ ವಾರ್ಡ್‌ಗೆ ದಾಖಲಿಸಲಾಯಿತು.

ಇತ್ತ ವಿಡಿಯೋ ವೈರಲ್‌ ಬಳಿಕ ಜಿಲ್ಲಾಧಿಕಾರಿ ಭವ್ಯಾ ಮಿತ್ತಲ್ ಅವರು ಇಬ್ಬರನ್ನೂ ಕೆಲಸದಿಂದ ತೆಗೆದುಹಾಕುವಂತೆ ಆದೇಶಿಸಿದ್ದಾರೆ. ಬುಡಕಟ್ಟು ಅಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಪ್ರಶಾಂತ್ ಆರ್ಯ ಅವರು ಪ್ರಾಂಶುಪಾಲರು ಮತ್ತು ಲೈಬ್ರೇರಿಯನ್ ನನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!