

ಪುತ್ತೂರು: ಸ್ಪರ್ಧಾತ್ಮಕ ಯುಗದಲ್ಲಿ ನೂತನ ಜನರೇಟರ್’ಗಳ ಆವಿಷ್ಕಾರವಾಗಿದ್ದು, ಜನರ ಬೇಡಿಕೆಗೆ ತಕ್ಕುದಾದ ಜನರೇಟರ್’ಗಳು ದೊರೆಯುತ್ತಿದೆ ಎಂದು ದ್ವಾರಕಾ ಕಾರ್ಪೋರೇಷನ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್ ಹೇಳಿದರು
ಕೊಂಬೆಟ್ಟು ಜಿ.ಎಲ್ ಟ್ರೇಡ್ ಸೆಂಟರ್ ನಲ್ಲಿರುವ ಪಶುಪತಿ ಲೈಟ್ಸ್, ಫ್ಯಾನ್ಸ್, ಇಲೆಕ್ಟಿಕಲ್ಸ್ ನಲ್ಲಿ ಹೋಂಡಾ ಇಂಜಿನ್ ಒಳಗೊಂಡ ಅಮೆರ್ ಎನ್.ಎಸ್.ಎಂ. ಇಂಡಿಯಾ ಸಂಸ್ಥೆಯ ಜನರೇಟರ್‌ಗಳ ಮಾಹಿತಿ, ಪ್ರದರ್ಶನ ಹಾಗೂ ಮಾರಾಟ ಮೇಳ ಗುರುವಾರ ದೀಪ ಬೆಳಗಿಸಿ ಮಾತನಾಡಿದರು.
“ಗ್ರಾಹಕರ ಅವಶ್ಯಕತೆಗಳನ್ನೇ ಆಧರಿಸಿ ಉತ್ಪನ್ನ ಪೂರೈಕೆ ಮಾಡುವುದರಿಂದ ಪಶುಪತಿ ಸಂಸ್ಥೆ ಯಶಸ್ಸು ಕಂಡಿದೆ. ಇದೀಗ ಜನರೇಟರ್ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದ್ದು, ಜನರ ನಂಬಿಕೆಗೆ ತಕ್ಕಂತೆ ಸೇವೆ ನೀಡಲಿದೆ” ಎಂದರು.
ಕಾರ್ಯಕ್ರಮದಲ್ಲಿ ಅಮೆರ್ ಸಂಸ್ಥೆಯ ರೀಜನಲ್ ಸೇಲ್ಸ್ ಮ್ಯಾನೇಜರ್ ಮಹೇಶ್ ಜೋಶಿ, ವೆಂಕಟರಮಣ ಭಟ್, ಉಪ್ಪಿನಂಗಡಿ ಕೃಷಿ ಏಜೆನ್ಸಿಯ ಸದಾಶಿವ ರೈ ಉಪಸ್ಥಿತರಿದ್ದರು.
ಈ ಸಂದರ್ಭ ಧರ್ಮಚಾವಡಿ ಸಿನಿಮಾದ ನಟ ಶರತ್ ಆಳ್ವ ಕೂರೇಲು ಹಾಗೂ ಎಲೆಕ್ಟ್ರಿಷಿಯನ್ ಯತೀಶ್ ಅವರನ್ನು ಸನ್ಮಾನಿಸಲಾಯಿತು.
ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಮಾಲಕ ಪಶುಪತಿ ಶರ್ಮ, “ಸ್ಪರ್ಧಾತ್ಮಕ ದರದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳತ್ತ ಗ್ರಾಹಕರ ಒಲವು ಇದೆ. ಬೆರಳ ತುದಿಯಲ್ಲಿ ಎಲ್ಲ ಮಾಹಿತಿ ಸಿಗುವ ಈ ಯುಗದಲ್ಲಿ ಸರಿಯಾದ ಮಾರ್ಗದರ್ಶನವೇ ಮುಖ್ಯ. ಇದಕ್ಕಾಗಿ ನಾವು ಈ ಮೇಳ ಹಮ್ಮಿಕೊಂಡಿದ್ದೇವೆ” ಎಂದು ಹೇಳಿದರು.
ಈ ತಿಂಗಳಾಂತ್ಯವರೆಗೆ ನಡೆಯುವ ಈ ಮೇಳದಲ್ಲಿ ಅತೀ ಕಡಿಮೆ ಮಾರ್ಜಿನ್ ಇಟ್ಟು ಮಾರಾಟ ನಡೆಯುತ್ತಿದೆ. ಬುಕಿಂಗ್ ಮಾಡುವ ಮೂಲಕ, ಬಳಿಕವೂ ಜನರೇಟರ್ ಖರೀದಿ ಸಾಧ್ಯವಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ವಿವಿಧ ವಿನ್ಯಾಸದ ಜನರೇಟರ್ ಲಭ್ಯ..
ಹೋಂಡಾ ಅಮೆರ್ ಎನ್.ಎಸ್.ಎಂ. ಇಂಡಿಯಾ ಮತ್ತು ಜೀನ್’ಎಕ್ಸ್ ಬ್ರಾಂಡ್’ಗಳ ಜನರೇಟರ್’ಗಳು ಸಂಸ್ಥೆಯಲ್ಲಿ ಲಭ್ಯವಾಗಲಿದೆ. ನಿರಂತರವಾಗಿ ಕಾಡುತ್ತಿರುವ ವಿದ್ಯುತ್ ಸಮಸ್ಯೆಯನ್ನು ನಿವಾರಿಸುವ ದೃಷ್ಟಿಕೋನದಿಂದ ಎಲ್ಲಾ ಕ್ಷೇತ್ರಗಳಿಗೂ ಅನ್ವಯವಾಗುವಂತಹ ಜನರೇಟರ್’ಗಳನ್ನು ಇಲ್ಲಿ ಕಾಣಲು ಸಾಧ್ಯ. ಪ್ರಮುಖವಾಗಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕರಾವಳಿ ಭಾಗದ ಕೃಷಿ ಚಟುವಟಿಕೆ ಸೊರಗುತ್ತಿರುವ ಕೆಲ ಉದಾಹರಣೆಯೂ ನಮ್ಮ ಮುಂದೆ ಬರುತ್ತದೆ. ಇದಕ್ಕೆ ಪರಿಹಾರದ ರೂಪದಲ್ಲಿ ಜನರೇಟರ್’ಗಳನ್ನು ಅನ್ವೇಷಿಸಿದ್ದು, ಕೃಷಿಕರ ಮುಂದೆ ಬರಲಿದೆ. ಇದಲ್ಲದೇ ಕನ್‌ಸ್ಟ್ರಕ್ಷನ್ / ಫ್ಯಾಬ್ರಿಕೇಷನ್ / ಎಲೆಕ್ಟಿಕಲ್ ವೆಲ್ಡಿಂಗ್ ಕೆಲಸಗಳಿಗಾಗಿ, ಅಂಗಡಿ – ಮಳಿಗೆಗಳಿಗಾಗಿ, ದಿನ ಬಳಕೆ ಹಾಗೂ ಕೈಗಾರಿಕೆಗಳಿಗಾಗಿ ವಿವಿಧ ವಿನ್ಯಾಸದ ಜನರೇಟರ್’ಗಳು ಲಭ್ಯವಾಗಲಿದೆ.
-ಪಶುಪತಿ ಶರ್ಮ, ಮಾಲಕರು, ಪಶುಪತಿ ಲೈಟ್ಸ್, ಫ್ಯಾನ್ಸ್ ಇಲೆಕ್ಟಿಕಲ್ಸ್
ಹೋಂಡಾ ಎಂಜಿನ್ ಹೊಂದಿರುವ ಈ ಜನರೇಟರ್’ಗಳು ಅತ್ಯುತ್ತಮ ಗುಣಮಟ್ಟ, ದೀರ್ಘ ಬಾಳಿಕೆ, ಪವರ್ ಬ್ಯಾಕಪ್, 1 ವರ್ಷದ ವ್ಯಾರಂಟಿ, ಕಡಿಮೆ ಬೆಲೆ ನಮ್ಮೂರಿನಲ್ಲೇ ಲಭ್ಯವಾಗಲಿದೆ ಎನ್ನುವುದು ಇಲ್ಲಿನ ವಿಶೇಷತೆ. ಈ ಯೋಜನೆಯು ಜು.24 ರಿಂದ 31ರ ವರೆಗೆ ಇದ್ದು ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳುವಂತಾಗಲಿ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.






