
ಪುತ್ತೂರು: ಜುಲೈ 14ರಂದು ಬೊಳುವಾರಿನಲ್ಲಿ ವ್ಯಕ್ತಿಯೋರ್ವ ತಲವಾರು ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿ, “ನಾವು ಭಾರತೀಯ ಸೇನೆ” ಫೇಸ್‌ಬುಕ್ ಪುಟದಲ್ಲಿ ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ಎಸ್‌ಡಿಪಿಐ ಪಕ್ಷದ ಪುತ್ತೂರು ಕ್ಷೇತ್ರದ ಅಧ್ಯಕ್ಷ ಅಶ್ರಫ್ ಬಾವು ವಿರುದ್ಧ ಆಗಸ್ಟ್ 5ರಂದು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.ಕ್ರ: 68/2025, ಕಲಂ: 240, 353(2) BNS 2023 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.






