
ಪುತ್ತೂರು, ಆ.6: ಪುತ್ತೂರು ತಾಲೂಕಿನ ಕೆದಿಲ ಗ್ರಾಮದ ಕಾಂತಕೋಡಿ ಎಂಬಲ್ಲಿ ಮಮತಾ (35) ಎಂಬ ಮಹಿಳೆಯ ಶವ ತೋಡಿನಲ್ಲಿ ಪತ್ತೆಯಾಗಿರುವ ಘಟನೆ ಕುರಿತಂತೆ ಇದೀಗ ಹೊಸ ತಿರುವು ಪಡೆಯುತ್ತಿದೆ
ಮೃತ ಮಮತಾ ಅವರು ಮದ್ಯಾಹ್ನದ ವೇಳೆ ತೋಡಿಗೆ ಬಟ್ಟೆ ತೊಳಿಯಲು ಹೋಗಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.. ಈ ಮಧ್ಯೆ ಆಕಸ್ಮಿಕವೋ, ಆತ್ಮಹತ್ಯೆಯೋ ಅಥವಾ ಕೊಲೆವೋ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ಮಮತಾರವರ ಗಂಡನ ಅಣ್ಣ ಈ ಘಟನೆಯ ನಂತರದಿಂದಲೇ ನಾಪತ್ತೆಯಾಗಿದ್ದು, ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ. ಇದರಿಂದಾಗಿ ಇದೀಗ ಅವರ ಮೇಲೂ ತನಿಖೆ ತೀವ್ರಗೊಳ್ಳುತ್ತಿದೆ.
ಸ್ಥಳಕ್ಕೆ ಭೇಟಿ ನೀಡಿದ ಪುತ್ತೂರು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಎಲ್ಲ ಸಾಧ್ಯತೆಯ ಅಂಶಗಳ ಬಗ್ಗೆ ವಿಚಾರಣೆ ಆರಂಭಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತರು ಇಬ್ಬರು ಸಣ್ಣ ಮಕ್ಕಳನ್ನು ಅಗಲಿದ್ದಾರೆ.






