
ಮಂಗಳೂರು: ಸ್ನೇಹಿತೆಯರೊಂದಿಗೆ ಮಂಗಳೂರಿಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೊರಟ ಯುವತಿ ನಾಪತ್ತೆಯಾಗಿರುವ ಘಟನೆ ಮಂಗಳೂರು ನಗರದ ಹೊಯ್ದೆ ಬಜಾರ್ ಲೂಕೈ ಹೌಸ್ ಪಾಲ್ಗಣಿ ಎಂಬಲ್ಲಿ ನಡೆದಿದೆ.
ನಾಪತ್ತೆಯಾದವರು ಶಾಹಿನಾ ಬಾನು (23). ಆಗಸ್ಟ್ 8ರಂದು ಮಂಗಳೂರು ಪೇಟೆಗೆ ತೆರಳಿ ತಿರುಗಿ ಬರುತ್ತೇನೆಂದು ತಂದೆಗೆ ತಿಳಿಸಿ ಹೋದ ಶಾಹಿನಾ ಮನೆಗೆ ವಾಪಸ್ಸಾಗದೆ ಕಾಣೆಯಾಗಿದ್ದಾರೆ. ಕುಟುಂಬದವರು ಆಕೆಯ ಸ್ನೇಹಿತರನ್ನು ವಿಚಾರಿಸಿದಾಗ, ಶಾಹಿನಾ ಅವರನ್ನು ಭೇಟಿಯಾಗಲಿಲ್ಲವೆಂದು ತಿಳಿಸಿದರು. ವಿವಿಧ ಕಡೆ ಹುಡುಕಾಟ ನಡೆದರೂ ಸುಳಿವು ಸಿಕ್ಕಿಲ್ಲ.
ಕಾಣೆಯಾದವರ ವಿವರ: ಎತ್ತರ 4.8 ಅಡಿ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕಪ್ಪು ಕೂದಲು. ಕಾಣೆಯಾದ ದಿನ ನೀಲಿ ಜೀನ್ಸ್, ಬಿಳಿ ಟಾಪ್ ಧರಿಸಿದ್ದರು. ಕನ್ನಡ, ತುಳು, ಹಿಂದಿ, ಇಂಗ್ಲೀಷ್, ಬ್ಯಾರಿ ಭಾಷೆ ಮಾತನಾಡುತ್ತಾರೆ.
ಮಾಹಿತಿ ದೊರೆತಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಠಾಣಾಧಿಕಾರಿ ಮನವಿ ಮಾಡಿದ್ದಾರೆ.






