
ಪುತ್ತೂರು:ದರ್ಬೆಯ ನಯಾ ಚಪ್ಪಲ್ ಬಜಾರ್ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸೆ. 5, ಶುಕ್ರವಾರ ಬೆಳಿಗ್ಗೆ 11.00 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಸಂತ ಫಿಲೋಮಿನಾ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಕೆ. ಸುರೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಡಾ. ಗೋಪಿನಾಥ್ ಪೈ,ರೇ. ಫಾ. ವಿಜಯ ಹಾರ್ವಿನ್, ಬಲರಾಮ್ ಆಚಾರ್ಯ, ಡಾ. ಅಶೋಕ್ ಪಡಿವಾಲ್, ಡಾ. ನಜೀರ್ ಅಹಮದ್, ಎಂ.ಜಿ. ರಜಾಕ್ ಭಾಗವಹಿಸಲಿದ್ದಾರೆ ಎಂದು ನಯಾ ಚಪ್ಪಲ್ ಬಜಾರ್ ಮಾಲೀಕರಾದ ಎಂ.ಜಿ. ರಫೀಕ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






