
ಉಪ್ಪಿನಂಗಡಿ: ಉಪ್ಪಿನಂಗಡಿ ನ್ಯೂ ಬಸ್‌ಸ್ಟ್ಯಾಂಡ್ ಬಳಿ ಉಬರ್ ಮೊಬೈಲ್ಸ್ & ಆಕ್ಸೆಸರೀಸ್ ಸೆ. 13ರ ಶನಿವಾರ ಬೆಳಗ್ಗೆ ಶುಭಾರಂಭ ಗೊಳ್ಳಲಿದೆ.
ಅಲ್ ಹಾಜಿ ಇ.ಕೆ. ಇಬ್ರಾಹಿಂ ಮದನಿ ಕಾಜಿ, ಕೃಷ್ಣಾಪುರ ಅವರು ಉದ್ಘಾಟಿಸಲಿದ್ದು, ಶಾಸಕ ಅಶೋಕ್ ರೈ, ಎನ್‌ಡಿಆರ್‌ಎಫ್ ಇನ್‌ಚಾರ್ಜ್ ಡಿಕೆ ಇನ್ಸ್‌ಪೆಕ್ಟರ್ ಶಾಂತಿಲಾಲ್ ಜಟಿಯಾ, ಪುಡ ಸದಸ್ಯ ನಿಹಾಲ್ ಪಿ. ಶೆಟ್ಟಿ,ಕಲಂಜಿಬೈಲ್ ಜುಮಾ ಮಸೀದಿ ಯ ಮಾಜಿ ಅಧ್ಯಕ್ಷ ಮೊಹಮ್ಮದ್ ಅಲಿ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್, ಡಿ.ಕೆ. ಮೊಬೈಲ್ ರಿಟೇಲರ್ ಅಸೋಸಿಯೇಶನ್ ಅಧ್ಯಕ್ಷ ಪ್ರಶಾಂತ್ ಶೆಣೈ, ಲಕ್ಷ್ಮಿ ವೆಂಕಟರಮಣ ದೇವಸ್ಥಾನ ಟ್ರಸ್ಟಿ ಡಿ. ಗಣೇಶ್ ಶೆಣೈ, ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಶಬೀರ್ ಕೆಂಪಿ, ಲಯನ್ಸ್ ಕ್ಲಬ್ ಪುತ್ತೂರು ರಝಾಕ್ ಎಂ.ಜಿ, ಅರಫಾ ವಿದ್ಯಾ ಕೇಂದ್ರ ನಿರ್ದೇಶಕ ಶರೀಕ್ ಅರಫಾ ಹಾಗೂ ಇಲಂತಿಲ ಪಂಚಾಯತ್ ಸದಸ್ಯ ಯೂಸುಫ್ ಪೆದಮಲೆ ಅತಿಥಿಗಳಾಗಿ ಹಾಜರಾಗಲಿದ್ದಾರೆ.
ಶೋರೂಮ್‌ನಲ್ಲಿ ಮೊಬೈಲ್ ಮಾರಾಟ, ಸರ್ವೀಸ್, ಆಕ್ಸೆಸರೀಸ್, ವಾಚ್‌ಗಳು ಹಾಗೂ ಸುಗಂಧ ದ್ರವ್ಯಗಳು ಲಭ್ಯವಿದ್ದು, ವಿಶೇಷ ಆಫರ್ ರೂಪದಲ್ಲಿ ₹999ಕ್ಕೂ ಅಧಿಕ ಖರೀದಿಗೆ ಉಚಿತ ಉಡುಗೊರೆ ನೀಡಲಾಗುತ್ತದೆ ಎಂದು ಪಾಲುದಾರರದ ಇರ್ಷಾದ್ ಎಂ.ಎಸ್,ರಿಯಾಜ್ ಎಂ.ಜಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






