
ಹಾಸನದ (Hassan) ಬೇಲೂರಿನಲ್ಲಿ ಗಣೇಶನ ದೇವಸ್ಥಾನದಲ್ಲಿ ದೇವರ ವಿಗ್ರಹದ ಮೇಲೆ (Ganesh idol) ಚಪ್ಪಲಿಯಿಟ್ಟು (Slipper) ವಿಕೃತಿ ಮೆರೆದಿರುವ ಘಟನೆಗೆ ಸಂಬಂಧಪಟ್ಟಂತೆ ವಿಧಾನ ಪರಿಷತ್ ಸದಸ್ಯ, ಬಿಜೆಪಿ ಮುಖಂಡ ಸಿಟಿ ರವಿ (CT Ravi) ಆಕ್ರೋಶ ವ್ಯಕ್ತಪಡಿಸಿದ್ದು, ಬೇಲೂರಿನ ಪುರಸಭೆ ಗಣಪತಿ ವಿಗ್ರಹದ ಮೇಲೆ ಚಪ್ಪಲಿ ಹಾಕಿದವರ ವಿರುದ್ಧ ಕೇವಲ ಪ್ರಕರಣ ದಾಖಲಿಸಿದ್ರೆ ಸಾಲಲ್ಲ, ಇಂಥವರ ಮನೆಗೆ ಬುಲ್ಡೋಜರ್ ಹತ್ತಿಸಬೇಕು ಎಂದಿದ್ದಾರೆ.
ಒಂದು ವೇಳೆ ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ತಪ್ಪು ಮಾಡಿದವರನ್ನು ರಕ್ಷಿಸಲು ಮುಂದಾದಲ್ಲಿ, ಹಿಂದೂ
ಸಮಾಜವೇ ಅಂಥವರ ಮನೆಗಳಿಗೆ ಬುಲ್ಡೋಜರ್ ತೆಗೆದುಕೊಂಡು ಹೋಗಲಿದೆ ಎಂದು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಸಮುದಾಯಗಳ ನಡುವೆ ಕೋಮು ಗಲಭೆ ಸೃಷ್ಟಿ ಮಾಡುವ ಹುನ್ನಾರದ ಭಾಗವಾಗಿ ಕೆಲವು ಕಿಡಿಗೇಡಿಗಳು ಈ ರೀತಿಯ ಹೀನ ಕೆಲಸ ಮಾಡಿದ್ದಾರೆ. ಈ ಹುನ್ನಾರದ ಭಾಗವಾಗಿಯೇ ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಲಾಗಿದೆ. ಹಿಂದೂಗಳು ಸಜ್ಜನರು, ಸಜ್ಜನರಿಗೆ ಸಿಟ್ಟು ತರಿಸಿದರೆ ಯಾರು ಉಳಿಯುವುದಿಲ್ಲ ಎಂದು ಎಚ್ಚರಿಕೆ ರವಾನಿಸಿದ್ದಾರೆ.






