
ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್ ಸಂಸ್ಥೆಯು ತನ್ನ ಪುತ್ತೂರು, ಮೂಡಬಿದಿರೆ, ಸುಳ್ಯ, ಹಾಸನ ಹಾಗೂ ಕುಶಾಲನಗರ ಶಾಖೆಗಳಲ್ಲಿ ವಜ್ರಾಭರಣಗಳ ವಾರ್ಷಿಕ ಮಹೋತ್ಸವದ ಅಂಗವಾಗಿ ‘ಗ್ಲೋ ಫೆಸ್ಟ್’ ಅನ್ನು ಡಿಸೆಂಬರ್ 15ರಂದು ಆರಂಭಿಸಿದೆ.
ಇನ್ನು ಕೇವಲ ನಾಲ್ಕು ದಿನಗಳಲ್ಲಿ ಮುಕ್ತಾಯಗೊಳ್ಳಲಿರುವ ಈ ಫೆಸ್ಟ್‌ನಲ್ಲಿ ಗ್ರಾಹಕರಿಗೆ ಅಚ್ಚರಿಯ ಕೊಡುಗೆಗಳು ಹಾಗೂ ಉಡುಗೊರೆಗಳೊಂದಿಗೆ ವಜ್ರಾಭರಣಗಳನ್ನು ಖರೀದಿಸುವ ಸುವರ್ಣ ಅವಕಾಶ ಲಭ್ಯವಿದೆ. ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರಟ್‌ಗೆ ರೂ.7,000 ವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.
ಈ ಆಫರ್ ಜನವರಿ 15ರವರೆಗೆ ಮಾತ್ರ ಅನ್ವಯವಾಗಲಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.






