ಸುಳ್ಯ: ಗಾಂಜಾ ಮಾರಾಟ ಪ್ರಕರಣದಲ್ಲಿ ಸುಮಾರು 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಉತ್ತರ ಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಳ್ಯ ಪೊಲೀಸ್ ಠಾಣೆ ಅ.ಕ್ರ. 328/2016, ಕಲಂ 8(c) ಜೊತೆಗೆ 20(b) ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾದ ಪ್ರಕರಣ ಹಾಗೂ LPC No: 11/2024 ಸಂಬಂಧ, ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಪರಾರಿಯಾಗಿದ್ದ ಉತ್ತರ ಪ್ರದೇಶದ ನಸೀಮ್ ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಸುಳ್ಯ ಠಾಣೆಯ ಹೆಡ್ ಕಾನ್ಸ್‌ಟೇಬಲ್ ರಮೇಶ್ ಎಲ್ (HC 359), ಹೆಡ್ ಕಾನ್ಸ್‌ಟೇಬಲ್ ರಾಜು ನಾಯ್ಕ್ ಡಿ (HC 368) ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ವಿಖ್ಯಾತ್ ಜೆ ಗೌಡ (PC 629) ಅವರನ್ನೊಳಗೊಂಡ ತಂಡವು ಉತ್ತರ ಪ್ರದೇಶ ರಾಜ್ಯದ ಖಾಜಿಪುರದಲ್ಲಿ ಮಾರ್ಚ್ 20, 2026ರಂದು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಬಂಧಿತನನ್ನು ಸುಳ್ಯಕ್ಕೆ ಕರೆತಂದು ಮಾನ್ಯ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!