Colombia) ವಾಯುಪಡೆಯ ವಿಮಾನವೊಂದು ಭೀಕರ ಅಪಘಾತದಲ್ಲಿ ಪತನಗೊಂಡಿದೆ (Plane Crash). ವಿಮಾನದಲ್ಲಿದ್ದ 110 ಜನರಲ್ಲಿ 80 ಜನರು ಸಾವನ್ನಪ್ಪಿದ್ದಾರೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ವರದಿಗಳ ಪ್ರಕಾರ, ವಿಮಾನ ಟೇಕ್ ಆಫ್ ಆದ ಸ್ವಲ್ಪ ಕೆಲ ಸೆಕೆಂಡ್ಗಳಲ್ಲೇ ಪತನಗೊಂಡಿದೆ.
ಕೊಲಂಬಿಯಾದ ಸ್ಥಳೀಯ ಸುದ್ದಿ ಸಂಸ್ಥೆ ಬ್ಲೂ ರೇಡಿಯೋ ವಿಮಾನದಲ್ಲಿ 110 ಸೈನಿಕರು ಇದ್ದರು ಎಂದು ವರದಿ ಮಾಡಿದೆ. ‘ಲಾಕ್‌ಹೀಡ್ ಮಾರ್ಟಿನ್ (LMT.N) ಹರ್ಕ್ಯುಲಸ್ ಸಿ -130 ವಿಮಾನವು ದಕ್ಷಿಣ ಕೊಲಂಬಿಯಾದಲ್ಲಿ ಪತನಗೊಂಡಿದೆ’ ಎಂದು ಕೊಲಂಬಿಯಾದ ರಕ್ಷಣಾ ಸಚಿವರು ಅಧಿಕೃತ ಮಾಹಿತಿ ನೀಡಿದ್ದಾರೆ.
110 ಸೈನಿಕರಿದ್ದ ವಿಮಾನ ಪತನ
ರಾಯಿಟರ್ಸ್ ಪ್ರಕಾರ, ವಿಮಾನವು ದಕ್ಷಿಣ ಕೊಲಂಬಿಯಾದ ಅಮೆಜಾನ್ ಪ್ರದೇಶದ ಪೆರುವಿನ ಗಡಿಯ ಸಮೀಪವಿರುವ ಪೋರ್ಟೊ ಲೆಗುಯಿಜಾಮೊದಿಂದ ಹೊರಟಿತು ಮತ್ತು ಸಶಸ್ತ್ರ ಪಡೆಗಳ ಸೈನಿಕರನ್ನು ಹೊತ್ತೊಯ್ಯುತ್ತಿತ್ತು ಎಂದು ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ಹೇಳಿದ್ದಾರೆ.
80ಕ್ಕೂ ಹೆಚ್ಚು ಸೈನಿಕರ ಸಾವಿನ ಶಂಕೆ
ವಿಮಾನ ಪತನದಲ್ಲಿ 80ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ಇದೆ. ಆದ್ರೆ ಅಪಘಾತದ ಕಾರಣ ಏನು ಅನ್ನೋದು ಇನ್ನೂ ತಿಳಿದುಬಂದಿಲ್ಲ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ. ವಿಮಾನವು 110 ಸೈನಿಕರನ್ನು ಹೊತ್ತೊಯ್ಯುತ್ತಿತ್ತು ಮತ್ತು ಅಪಘಾತವು ನಗರ ಕೇಂದ್ರದಿಂದ ಕೇವಲ 3 ಕಿ.ಮೀ ದೂರದಲ್ಲಿ ಸಂಭವಿಸಿದೆ.
ಇದಕ್ಕೂ ಮೊದಲು, ಫೆಬ್ರವರಿ ಅಂತ್ಯದಲ್ಲಿ, ಬೊಲಿವಿಯನ್ ವಾಯುಪಡೆಯ ಹರ್ಕ್ಯುಲಸ್ ಸಿ -130 ರಾಜಧಾನಿ ಲಾ ಪಾಜ್ ಬಳಿಯ ಜನನಿಬಿಡ ಆಲ್ಟೊ ನಗರದ ಬಳಿ ಅಪಘಾತಕ್ಕೀಡಾಯಿತು. ಅಪಘಾತದಲ್ಲಿ 20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ರು ಮತ್ತು 30 ಜನರು ಗಾಯಗೊಂಡರು.
ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ಪೋಸ್ಟ್
” ಇದು ದೇಶಕ್ಕೆ ತುಂಬಾ ನೋವಿನ ಘಟನೆ. ನಮ್ಮ ಪ್ರಾರ್ಥನೆಗಳು ನಿಮಗೆ ಧೈರ್ಯವನ್ನು ನೀಡುತ್ತವೆ ಎಂದು ನಾವು ಭಾವಿಸುತ್ತೇವೆ” ಎಂದು ಸಚಿವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ.














