ಇರಾನ್ (Iran) ಜೊತೆಗಿನ ಯುದ್ಧಕ್ಕೆ ಅಮೆರಿಕ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) 5 ದಿನಗಳ ಕದನ ವಿರಾಮ ಘೋಷಿಸಿದ್ದಾರೆ. ಆದರೆ ಟ್ರಂಪ್ ಮಾತಿಗೆ ಇರಾನ್ ಒಪ್ಪಿಲ್ಲ. ನಮ್ಮ ಜೊತೆ ಚರ್ಚೆ ಮಾಡದೇ ಕದನ ವಿರಾಮ ಘೋಷಿಸಿದ್ದಾರೆ.
ಅಮೆರಿಕ ಸೋಲುತ್ತಿದೆ ಎಂದು ಅಪಹಾಸ್ಯ ಮಾಡಿದೆ. ‘ಅಮೆರಿಕ ಜೊತೆ ಇರಾನ್ ಗೆ ನೇರ ಅಥವಾ ಪರೋಕ್ಷ ಮಾತುಕತೆ ನಡೆದಿಲ್ಲ’ ಎಂದು ಇರಾನ್ ಮಾಧ್ಯಮ ಪ್ರೆಸ್ ಟಿವಿ ಹೇಳಿದೆ.
ಸಾಮಾಜಿಕ ಮಾಧ್ಯಮದಲ್ಲಿ ಮೆಹರ್ ನ್ಯೂಸ್ ಮಾಡಿರುವ ಪೋಸ್ಟ್ ಪ್ರಕಾರ, ತೈಲ ಕೇಂದ್ರಗಳ ಮೇಲಿನ ಇತ್ತೀಚಿನ ದಾಳಿಗಳು ಮತ್ತು ಟೆಹ್ರಾನ್‌ನ ಕಠಿಣ ಉತ್ತರದ ಬಳಿಕ ಅಮೆರಿಕ ಬೆದರಿದೆ. ಯುದ್ಧ ಮುಂದುವರೆಸಬೇಕಾ ಬೇಡ್ವಾ ಎಂಬ ಬಗ್ಗೆ ಮರುಪರಿಶೀಲಿಸುತ್ತಿದೆ ಎಂದಿದೆ.
ಟೆಹ್ರಾನ್ ಟೈಮ್ಸ್ ಡೊನಾಲ್ಡ್ ಟ್ರಂಪ್ ಅವರನ್ನು ಅವಮಾನಿಸಿದೆ. ಯುದ್ಧಕ್ಕೆ ಬಂದು ಓಡಿಹೋದ ದೊಡ್ಡಣ್ಣ ಎಂದು ವ್ಯಂಗ್ಯವಾಡಿದೆ.
ಮಾತುಕತೆ ಅಸಾಧ್ಯ
ಇರಾನ್‌ನ ನಂಬುಗೆಯ ಮಿಲಿಟರಿಯ ಅಬ್ಬರ ಮತ್ತು ಅಮೆರಿಕ, ಪಶ್ಚಿಮ ದೇಶಗಳಲ್ಲಿ ಹೆಚ್ಚುತ್ತಿರುವ ಆರ್ಥಿಕ ಒತ್ತಡಗಳಿಂದಾಗಿ ಟ್ರಂಪ್ ಮಾತುಕತೆಯ ಪ್ರಸ್ತಾಪವನ್ನು ಇಟ್ಟಿದ್ದಾರೆ ಎಂದು ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಪ್ರೆಸ್ ಟಿವಿ ವರದಿ ಮಾಡಿದೆ.
ಅಮೆರಿಕದ ಜೊತೆ ಮಾತುಕತೆಗಳು ನಡೆಯುತ್ತಿಲ್ಲ, ಹಾರ್ಮುಜ್ ಜಲಸಂಧಿಯನ್ನು ತೆರೆಯುವುದಿಲ್ಲ ಇಲ್ಲವೇ ಇಂಧನ ಮಾರುಕಟ್ಟೆ ಸರಿದಾರಿಗೆ ಬರಲು ಬಿಡಲ್ಲ ಎಂದು ಇರಾನ್ ಹೇಳಿದೆ.
ಇರಾನ್ ಯುದ್ಧಕ್ಕೆ 5 ದಿನದ ಕದನ ವಿರಾಮ
ಇರಾನ್, ಇಸ್ರೇಲ್, ಅಮೆರಿಕ ಯುದ್ಧದಿಂದ ಇಡೀ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಈ ಯುದ್ಧಕ್ಕೆ ಟ್ರಂಪ್ 5 ದಿನಗಳ ಕದನ ವಿರಾಮ ಘೋಷಿಸಿದ್ದಾರೆ.
ದಾಳಿ ಮುಂದೂಡಲು ಪ್ರಮುಖ ಕಾರಣ ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಮಾತುಕತೆಗಳು. ‘ಕಳೆದ ಎರಡು ದಿನಗಳಿಂದ ಅಮೆರಿಕ ಮತ್ತು ಇರಾನ್ ನಡುವೆ ಸಕಾರಾತ್ಮಕ ಹಾಗೂ ಅರ್ಥಪೂರ್ಣ ಮಾತುಕತೆಗಳು ನಡೆದಿವೆ. ಈ ಪ್ರಕ್ರಿಯೆ ಮುಂದೆಯೂ ಮುಂದುವರಿಯಲಿದೆ’ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೊಡ್ಡಣ್ಣ ಡೊನಾಲ್ಡ್ ಟ್ರಂಪ್ 48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ನಿಮ್ಮ ವಿದ್ಯುತ್ ಸ್ಥಾವರ ನಾಶ ಮಾಡುವುದಾಗಿ ಇರಾನಿಗೆ ಬೆದರಿಕೆ ಹಾಕಿದ್ದರು. ಈ ಡೆಡ್‌ಲೈನ್ ಒಳಗಡೆ ಇರಾನ್ ತೆರೆಯದೇ ಇದ್ದರೆ ದೊಡ್ಡ ಪ್ರಮಾಣದ ಯುದ್ಧ ನಡೆಯುವ ಸಾಧ್ಯತೆ ಇತ್ತು. ಆದರೆ, ಇರಾನ್ ಅಮೆರಿಕ ಅಧ್ಯಕ್ಷರ ಮಾತಿಗೆ ಸೊಪ್ಪು ಹಾಕಿರಲಿಲ್ಲ. ಇದೀಗ ಡೊನಾಲ್ಡ್ ಟ್ರಂಪ್ ಅವರೇ ಕದನ ವಿರಾಮ ಘೋಷಣೆ ಮಾಡಿದ್ದಾರೆ.
ಇರಾನ್ ಬೆದರಿಕೆಗೆ ಜಗ್ಗದ ಕಾರಣ ದೊಡ್ಡ ಪ್ರಮಾಣದ ದಾಳಿ ನಡೆಯಬಹುದು ಎಂದು ಊಹಿಸುತ್ತಿದ್ದಾಗಲೇ ಟ್ರಂಪ್ 5 ದಿನದ ಕದನ ವಿರಾಮ ಘೋಷಣೆ ಮಾಡಿದ್ದಾರೆ.














