ಪುತ್ತೂರು; ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೧೫ ಪರಿಶಿಷ್ಠ ಜಾತಿ ಕಾಲನಿ ಅಭಿವೃದ್ದಿಗೆ ಸರಕಾರದಿಂದ ೭೫ ಲಕ್ಷ ಅನುದಾನ ಮಂಜೂರಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಪ.ಜಾತಿ ಕಾಲನಿಯ ರಸ್ತೆ ಅಭಿವೃದ್ದಿಗಾಗಿ ಈ ಅನುದಾನವನ್ನು ವಿನಿಯೋಗಿಸಲಾಗುತ್ತದೆ. ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನೇಕ ಕಾಲನಿಗಳ ರಸ್ತೆಗಳ ಅಭಿವೃದ್ದಿಗೆ ಅನುದಾನವನ್ನು ಒದಗಿಸಲಾಗಿದೆ. ೭೫ ಲಕ್ಷ ರೂ ಅನುದಾನದ ಬೇಡಿಕೆಯನ್ನು ಸರಕಾರಕ್ಕೆ ಸಲ್ಲಿಸಿದಾಗ ೭೫ ಲಕ್ಷ ಅನುದಾನವನ್ನು ಮಂಜೂರು ಮಾಡಿದೆ. ಬಾಕಿ ಇರುವ ಕಾಲನಿಗಳ ರಸ್ತೆ ಅಭಿವೃದ್ದಿಗೆ ಮುಂದಿನ ದಿನಗಳಲ್ಲಿ ಅನುದಾನವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.



ಅಭಿವೃದ್ದಿ ಹೊಂದಲಿರುವ ಕಾಲನಿಗಳು:

ಹಿರೆಬಂಡಾಡಿ ಗ್ರಾಮದ ದಾಸರಮೂಲೆ ಅಂಗನವಾಡಿ ಪಕ್ಕದಿಂದ ಅಕಿರೆ ಪಜಾತಿ ಕಾಲನಿ ರಸ್ತೆ ಅಬಿವೃದ್ದಿಗೆ ೫ ಲಕ್ಷ, ಪಾಣಾಜೆ ಗ್ರಾಮ ಉಡ್ಡಂಗಳ ಕೀಲಂಪಾಡಿ ಪ ಜಾತಿ ಕಾಲನಿ ಅಭಿವೃದ್ದಿಗೆ ೫ ಲಕ್ಷ, ಇರ್ದೆ ಗ್ರಾಮದ ಇರ್ದೆ ಕೋನಡ್ಕ ಪ ಜಾತಿ ಕಾಲನಿ ಅಭಿವೃದ್ದಿಗೆ ೫ ಲಕ್ಷ, ಬಲ್ನಾಡು ಗ್ರಾಮದ ಸಾರ್ಯ ಬಂಡಸಾಲೆ, ಕೋಡಿಯಡ್ಕ ಪ ಜಾತಿ ಕಾಲನಿಗೆ ೫ ಲಕ್ಷ, ಮುಂಡೂರು ಗ್ರಾಮದ ಹಿಂಧಾರು ನೆಕ್ಕಿಲಿಕುರೆಮಜಲು ಕಾಲನಿ ರಸ್ತೆ ಅಭಿವೃದ್ದಿಗೆ ೫ ಲಕ್ಷ, ನಿಡ್ಪಳ್ಳಿ ಗ್ರಾಮದ ನೆಕ್ಕಿಲು ಡೊಂಬಟಗಿರಿಮೊಯಿಲಕೋಟೆ ಪಜಾತಿ ಕಾಲನಿಗೆ ೫ ಲಕ್ಷ , ಆರ್ಯಾಪು ಗ್ರಾಮದ ಒಳತ್ತಡ್ಕ ನೀರಿನ ಟ್ಯಾಂಕ್ ಬಳಿ ಕಾಲನಿ ಅಭಿವೃದ್ದಿಗೆ ೫ ಲಕ್ಷ, ಕೊಳ್ತಿಗೆ ಗ್ರಾಮದ ಕೆಮ್ಮಾರ ಅಡ್ಕರಗುರಿ ಪ ಜಾತಿ ಕಾಲನಿ ರಸ್ತೆ ಅಭಿವೃದ್ದಿಗೆ ೫ ಲಕ್ಷ, ಕೋಡಿಂಬಾಡಿ ಗ್ರಾಮದ ತುರ್ಕೆದ ಗುರಿ ಪ ಜಾರಿ ಕಾಲನಿಗೆ ೫ ಲಕ್ಷ, ಕಬಕ ಗ್ರಾಮದ ಪಟ್ಟಡ್ಕ ಪ ಜಾಲನಿ ಅಭಿವೃಧ್ದಿಗೆ ೫ ಲಕ್ಷ, ಮಾಣಿಲ ಗ್ರಾಮದ ಮುರುವ ಮಣ್ಣಾಪು ಕಾಲನಿ ಅಭಿವೃದ್ದಿಗೆ ೫ ಲಕ್ಷ, ಪೆರುವಾಯಿ ಗ್ರಾಮದ ಮುಚ್ಚಿರಪದವು ನವಗ್ರಾಮ ರಸ್ತೆ ಅಭಿವೃದ್ದಿ ೫ ಲಕ್ಷ, ಪೆರ್ನೆ ಗ್ರಾಮದ ಬಿಳಿಯೂರು ಒಂದನೇ ವಾರ್ಡ್ ಬಿಳಿಯೂರು ಪ ಜಾತಿ ಕಾಲನಿ ರಸ್ತೆ ಅಭಿವೃದ್ದಿಗೆ ೫ ಲಕ್ಷ, ಪುಣಚಾ ಗ್ರಾಮದ ನವಗ್ರಾಮ ಪ ಜಾತಿ ಕಾಲನಿ ರಸ್ತೆ ಅಭಿವೃದ್ದಿಗೆ ೫ ಲಕ್ಷ,ಕುಳಗ್ರಾಮದ ಗುಂಪೆಕಲ್ಲಿನಕಟ್ನಾಜೆ ಪಜಾತಿ ಕಾಲನಿ ಅಭಿವೃದ್ದಿಗೆ ೫ ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!