ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯ ಅರ್ಹ ಫಲಾನುಭವಿಗಳನ್ನು ಗುರುತಿಸುವ ಉದ್ದೇಶದಿಂದ ಹೊಸ ಮಾರ್ಗಸೂಚಿಗಳನ್ನು ರೂಪಿಸಲಾಗಿದ್ದು, ಫಲಾನುಭವಿ ಮಹಿಳೆಯರು ತಮ್ಮ ಪತಿಯ ಆಧಾರ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಲಿದೆ ಎಂದು ತಿಳಿದುಬಂದಿದೆ.ಹೊಸ ನಿಯಮಗಳ ಪ್ರಕಾರ, ಮಹಿಳೆಯ ಆಧಾರ್‌ ವಿವರಗಳ ಜತೆಗೆ ಪತಿಯ ಆಧಾರ್ ಸಂಖ್ಯೆಯನ್ನೂ ಲಿಂಕ್ ಮಾಡಬೇಕಾಗುತ್ತದೆ. ಫಲಾನುಭವಿಗಳು ನೀಡುವ ಬ್ಯಾಂಕ್ ಖಾತೆಗೆ ಯಾವುದೇ ಸಾಲದ ಲಿಂಕ್ ಇರಬಾರದು. ಖಾತೆ ವಿವರಗಳಲ್ಲಿ ಸಮಸ್ಯೆ ಕಂಡುಬಂದಲ್ಲಿ ಅಥವಾ ಆಧಾರ್‌ನಲ್ಲಿರುವ ಹೆಸರು ಹಾಗೂ ವಿಳಾಸದಲ್ಲಿ ವ್ಯತ್ಯಾಸ ಕಂಡುಬಂದರೆ ಮಾಸಿಕ ₹2,000 ನೆರವು ಸ್ಥಗಿತಗೊಳ್ಳುವ ಸಾಧ್ಯತೆ ಇದೆ

.ಮನೆಮನೆಗೆ ತೆರಳಿ ಪರಿಶೀಲನೆಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆಗಾಗಿ ವಿಶೇಷ ತನಿಖಾ ತಂಡ ಅಥವಾ ಗಣತೀದಾರರನ್ನು ನಿಯೋಜಿಸುವ ಸಾಧ್ಯತೆ ಇದ್ದು, ಅಧಿಕಾರಿಗಳು ಮನೆಮನೆಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.ಪರಿಶೀಲನೆ ವೇಳೆ ದಾಖಲೆಗಳ ಪರಿಶೀಲನೆಯ ಜತೆಗೆ ಫಲಾನುಭವಿಯ ಮುಖದ ಗುರುತು ದೃಢೀಕರಣ (ಫೇಶಿಯಲ್‌ ವೆರಿಫಿಕೇಷನ್) ಹಾಗೂ ಜಿಪಿಎಸ್‌ ಆಧಾರಿತವಾಗಿ ಮನೆಯ ಫೋಟೊವನ್ನು ಸ್ಥಳದಲ್ಲೇ ಅಪ್‌ಲೋಡ್ ಮಾಡುವ ವ್ಯವಸ್ಥೆಯನ್ನೂ ಅಳವಡಿಸುವ ಪ್ರಸ್ತಾವವಿದೆ.

ಮತದಾರರ ಅಂತಿಮ ಪಟ್ಟಿ ಬಳಿಕ ಪ್ರಕ್ರಿಯೆ?ಮತದಾರರ ಅಂತಿಮ ಪಟ್ಟಿ ಪ್ರಕಟಗೊಂಡ ಬಳಿಕ ಮರುಪರಿಶೀಲನಾ ಪ್ರಕ್ರಿಯೆಗೆ ಚಾಲನೆ ನೀಡುವ ಸಾಧ್ಯತೆ ಇದೆ. ಈಗಾಗಲೇ 17 ಪ್ರಶ್ನೆಗಳನ್ನು ಒಳಗೊಂಡ ಹೊಸ ಅರ್ಜಿ ನಮೂನೆ ಸಿದ್ಧವಾಗಿದ್ದು, ಮುಖ್ಯಮಂತ್ರಿ ಕಚೇರಿಯ ಅಂತಿಮ ಒಪ್ಪಿಗೆಗಾಗಿ ಕಾಯಲಾಗುತ್ತಿದೆ. ಮುಖ್ಯಮಂತ್ರಿಗಳ ಅನುಮೋದನೆ ದೊರೆತ ಬಳಿಕ ಅಧಿಕಾರಿಗಳು ಪರಿಶೀಲನಾ ಪ್ರಕ್ರಿಯೆ ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ತೆರಿಗೆ ಪಾವತಿದಾರರು ಹಾಗೂ ಸರಕಾರಿ ನೌಕರರು ಯೋಜನೆಯ ಪ್ರಯೋಜನ ಪಡೆಯುವುದನ್ನು ತಡೆಯುವ ಉದ್ದೇಶದಿಂದ ಈ ಮರುಪರಿಶೀಲನಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!