ಪುತ್ತೂರು: ಬೆಂಗಳೂರು ಮತ್ತು ಸುತ್ತಮುತ್ತ ಜಿಲ್ಲೆಗಳಲ್ಲಿ ನಾನ್ ವೆಜ್‌ ಪ್ರಿಯರ ನೆಚ್ಚಿನ ಫುಡ್‌ ಗಳಲ್ಲಿ ಒಂದಾಗಿರುವ ʼದೊನ್ನೆ ಬಿರಿಯಾನಿʼ ಇನ್ನು ಪುತ್ತೂರಿನಲ್ಲೂ ಸಿಗಲಿದೆ.

ಹೌದು, ಪುತ್ತೂರಿನ ದರ್ಬೆಯಲ್ಲಿರುವ ರಿಲಯನ್ಸ್‌ ಡಿಜಿಟಲ್‌ ಪಕ್ಕದಲ್ಲಿ ನ.04ರಂದು ದೊನ್ನೆ ಬಿರಿಯಾನಿ ರೆಸ್ಟೋರೆಂಟ್‌ ಶುಭಾರಂಭಗೊಳ್ಳಲಿರುವ ಮೂಲಕ ಈ ಭಾಗದ ನಾನ್‌ ವೆಜ್‌ ಮತ್ತು ದೊನ್ನೆ ಬಿರಿಯಾನಿ ಪ್ರಿಯರ ಬಹುದಿನಗಳ ಕನಸು ನನಸಾಗಲಿದೆ!

ನ.೦೪ರಂದು ಈ ನೂತನ ರೆಸ್ಟೋರೆಂಟನ್ನು ಬೆಳಿಗ್ಗೆ 11 ಗಂಟೆಗೆ ಶಾಸಕರಾದ ಅಶೋಕ್‌ ಕುಮಾರ್‌ ರೈ ಉದ್ಘಾಟಿಸಲಿದ್ದು, ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್‌ ಆರಿಕೋಡಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್‌ ಅಸ್ಸಯದ್‌ ಅಹಮದ್‌ ಪೂಕೋಯ ತಂಙಳ್‌, ಮಾಯಿದೆ ದೇವುಸ್‌ ಚರ್ಚ್ ನ ಪ್ರಧಾನ ಧರ್ಮಗುರುಗಳಾಗಿರುವ ರೆ|ಫಾ| ಲಾರೆನ್ಸ್‌ ಮಸ್ಕರೇನ್ಹಸ್‌ ಸೇರಿದಂತೆ ಸರ್ವಧರ್ಮದ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇಲ್ಲಿ ದೊನ್ನೆ ಬಿರಿಯಾನಿ ಮಾತ್ರವಲ್ಲದೇ, ಕರಾವಳಿ ಸ್ಟೈಲಿನ ಬಾಳೆ ಎಲೆ ಮೀನೂಟ, ಮೀನಿನ ವಿವಿಧ ಖಾದ್ಯಗಳು, ವೆರೈಟಿ ಚಿಕನ್‌ ಫುಡ್‌ ಗಳು ಸೇರಿದಂತೆ ನಾನ್‌ ವೆಜ್‌ ಐಟಂಗಳು ಮತ್ತು ನಿಮ್ಮ ಮೈ-ಮನಕ್ಕೆ ತಂಪಿನ ಅನುಭವ ನೀಡುವ ಜ್ಯೂಸ್‌ ಗಳು ಇಲ್ಲಿ ಲಭ್ಯವಿದೆ.

ಈ ವಿನೂತನ ಮಾದರಿಯ ರೆಸ್ಟೋರೆಂಟಿಗೆ ಭೇಟಿ ಕೊಟ್ಟು ಇಲ್ಲಿನ ಖಾದ್ಯಗಳ ಸವಿಯನ್ನು ಸವಿಯುವ ಮೂಲಕ ನಮ್ಮನ್ನು ಪುತ್ತೂರು ಸಹಿತ ಹತ್ತೂರಿನ ಖಾದ್ಯಪ್ರಿಯರು ಬೆಂಬಲಿಸುವಂತೆ ರೆಸ್ಟೋರೆಂಟ್‌ ಮಾಲಕರು ವಿನಂತಿಸಿಕೊಂಡಿದ್ದಾರೆ.

ದಕ್ಷಿಣ ಭಾರತದ ಪ್ರಸಿದ್ಧ ಮಾಂಸಹಾರಿ ಫುಡ್‌ ಗಳಲ್ಲಿ ದೊನ್ನೆ ಬಿರಿಯಾನಿಯೂ ಸಹ ಒಂದು. ಕಡಿಮೆ ಪ್ರಮಾಣದ ಮಸಾಲೆಯನ್ನು ಬಳಸಿ ತಯಾರಿಸುವ ಈ ಬಿರಿಯಾನಿಯ ರುಚಿಯನ್ನು ಸವಿದವರಷ್ಟೇ ಬಲ್ಲರು. ಬಿಸಿ ಬಿಸಿ ದೊನ್ನೆ ಬಿರಿಯಾನಿ ಸವಿಯನ್ನು ನೀವೂ ಸವಿಯಬೇಕೆಂದಿದ್ದರೆ ನ.೦4ರ ಬಳಿಕ ದೊನ್ನೆ ಬಿರಿಯಾನಿ ರೆಸ್ಟೋರೆಂಟಿಗೊಮ್ಮೆ ಫ್ಯಾಮಿಲಿ ಸಹಿತವಾಗಿ ವಿಸಿಟ್‌ ಮಾಡಿ.

Leave a Reply

Your email address will not be published. Required fields are marked *

Join WhatsApp Group
error: Content is protected !!