ಬೆಂಗಳೂರು ಹೊರವಲಯದಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಈತ ಈ ಹಿಂದೆ ಅತ್ಯಾಚಾರ ಮತ್ತು ಕಿಡ್ನಾಪ್ ಪ್ರಕರಣದಲ್ಲಿ 12 ವರ್ಷ ಜೈಲುವಾಸ ಅನುಭವಿಸಿದ್ದನು. ಹತ್ತು ವರ್ಷದ ಬಿಡುಗಡೆ ಅವಧಿ ಮುಗಿದ್ರೂ ಹಣ ಕಟ್ಟಲಾಗದೆ 1.5 ವರ್ಷ ಜೈಲಲ್ಲೇ ಉಳಿದಿದ್ದನು..
ಆಗ ಮಾನವೀಯತೆ ದೃಷ್ಟಿಯಿಂದ ನಟ ದುನಿಯಾ ವಿಜಯ್ ಹಣ ಕಟ್ಟಿ ಬಿಡಿಸಿದ್ದರು. ಇಷ್ಟಾದರೂ ಮನಪರಿವರ್ತನೆಯಾಗದೇ ಅಂತಹದ್ದೇ ಕೃತ್ಯಗಳಲ್ಲಿ ಪದೇ ಪದೇ ಬಾಗಿಯಾಗಿ ಇದೀಗ ಡಬಲ್ ಮರ್ಡರ್ ಕೇಸ್‌ನಲ್ಲಿ ಆರೋಪಿ ಮತ್ತೆ ಜೈಲು ಸೇರಿದ್ದಾನೆ.
ಕುಡಿದ ನಶೆಯಲ್ಲಿ ಗಲಾಟೆ
ಬಸ್ ಸರ್ವಿಸ್ ಶೆಡ್ ನಲ್ಲಿ ಕೆಲಸ ಮಾಡ್ತಿದ್ದ ಸುರೇಶ್ ಬಂಧಿತ ಆರೋಪಿಯಾಗಿದ್ದಾನೆ. ನಾಗೇಶ್ ( 55 ) ಮತ್ತು ಮಂಜುನಾಥ್ ( 50 ) ಎಂಬುವರನ್ನ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದನು. ಕುಡಿದ ನಶೆಯಲ್ಲಿ ಗಲಾಟೆ ಮಾಡಿಕೊಂಡು ರಾಡ್ ನಿಂದ ತಲೆಗೆ ಹೊಡೆದು ಇಬ್ಬರ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಹಣ ಕಟ್ಟಿ ಜೈಲಿನಿಂದ ಬಿಡಿಸಿದ್ದ ವಿಜಿ
ದುನಿಯಾ ವಿಜಿ ಜೈಲಿಂದ ಬಿಡಿಸಿದ್ದ ಆರೋಪಿಯಿಂದ ಜೋಡಿ ಕೊಲೆ ನಡೆದಿದೆ. ಬಾಗಲೂರು ಡಬಲ್ ಮರ್ಡರ್ ಆರೋಪಿ ಸುರೇಶ್ ಗೆ ಶ್ಯೂರಿಟಿ ಹಣ ನೀಡಿ ಬಿಡಿಸಿದ್ದನು. ಆದರೆ ಇದೀಗ ಆರೋಪಿಯು ದುನಿಯಾ ವಿಜಿಯ ಆಶಯವನ್ನ ವ್ಯರ್ಥ ಮಾಡಿದ್ದಾನೆ.ಆರೋಪಿ ಸುರೇಶ್ ಈ ಹಿಂದೆ ವಿರುದ್ಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ 12 ವರ್ಷ ಜೈಲುವಾಸ ಅನುಭವಿಸಿದ್ದನು. ಅಷ್ಟೇ ಅಲ್ಲದೇ ಡಬಲ್ ಮರ್ಡರ್ ಕೇಸ್ ನಲ್ಲಿ ಬಂಧನವಾಗಿದ್ದನು. ಅತ್ಯಾಚಾರ ಕೇಸ್ ನಲ್ಲಿ ಹತ್ತು ವರ್ಷದ ಬಿಡುಗಡೆ ಅವಧಿ ಮುಗಿದ್ರೂ ಹಣ ಕಟ್ಟಲಾಗದೆ 1.5 ವರ್ಷ ಜೈಲಲ್ಲೇ ಉಳಿದಿದ್ದನು. ಆಗ ಮಾನವೀಯತೆ ಮೇಲೆ ನಟ ದುನಿಯಾ ವಿಜಯ್ ಅವರು ಹಣ ಕಟ್ಟಿ ಬಿಡಿಸಿದ್ದರಂತೆ. ಆ ವೇಳೆ ದುನಿಯಾ ವಿಜಿ ಅವರು ಪರಪ್ಪನ ಅಗ್ರಹಾರದಿಂದ ಹತ್ತಕ್ಕೂ ಹೆಚ್ಚು ಮಂದಿಯನ್ನ ಹಣ ಕಟ್ಟಿ ಬಿಡುಗಡೆಗೊಳಿಸಿದ್ದರು. ಅದೇ ಟೀಂನಲ್ಲಿ ಈ ಆರೋಪಿ ಸುರೇಶ್ ರಿಲೀಸ್ ಆಗಿ ಬಂದಿದ್ದನು.
ಜನವರಿಯಲ್ಲಿ ಜೈಲಿಂದ ರಿಲೀಸ್ ಆಗಿ ಮಾರ್ಕೆಟ್ ನಲ್ಲಿ ಕೊತ್ತಮೀರಿ ಸೊಪ್ಪು ಮಾರ್ಕೆಟ್ ನಲ್ಲಿ ಕೆಲಸ ಮಾಡ್ತಿದ್ದನು. ಆ ಬಳಿಕ ಸಿಂಗಹಳ್ಳಿಯ ಬಳಿ ಬಸ್ ಸರ್ವಿಸ್ ಕೆಲಸಕ್ಕೆ ಸೇರಿದ್ದನು. ಬಾಗಲೂರಿನಲ್ಲಿ ಕೊಲೆ ಬಳಿಕ 35 ಕಿ.ಮೀ ನಡೆದುಕೊಂಡೇ ಮಾರ್ಕೆಟ್ ಬಂದಿದ್ದ. ಈತನ ಪೋಟೋ ಆಗಲಿ, ಇವನ ಬಳಿ ಪೋನ್ ಕೂಡಾ ಇರಲಿಲ್ಲ, ಮಾರ್ಕೆಟ್ ನಲ್ಲಿ ಕೆಲಸ ಮಾಡ್ತಿದ್ದ ಎನ್ನುವ ಊಹೆ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಇದೀಗ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಡ್ ನಿಂದ ಹೊಡೆದು ಕೊಲೆ
ಹತ್ಯೆಗೀಡಾದ ನಾಗೇಶ್ ಮತ್ತು ಮಂಜುನಾಥ್ ಅವರು ಕುಡಿದ ಮತ್ತಿನಲ್ಲಿ ಆರೋಪಿ ಸುರೇಶ್‌ಗೆ ಬಾಯಿಗೆ ಬಂದಂತೆ ಬೈಯುವುದು, ನೀನು ಕಳ್ಳ, ನಿನ್ನ ಮೇಲೆ ಕೇಸ್ ಗಳಿವೆ ಎಂದು ಸದಾ ಹೀಯಾಸಿಸ್ತಿದ್ದರು. ಶುಕ್ರವಾರ ರಾತ್ರಿ ಕೂಡಾ ಕುಡಿದ ಬಳಿಕ ನಿಂದಿಸಿದ್ದಾರೆ. ಇಂದರಿಂದ ಬೇಸತ್ತು ಆರೋಪಿ ಸುರೇಶ್ ಇಬ್ಬರನ್ನ ರಾಡ್ ನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದನು ಎಂದು ಹೇಳಲಾಗುತ್ತಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಸಿಂಗಹಳ್ಳಿ ಗ್ರಾಮದ ಬಳಿ ಇರುವ ಎಸ್ ಆರ್ ಎಸ್ ಟ್ರಾವೆಲ್ಸ್ ನ ಪಾರ್ಕಿಂಗ್ ಶೆಡ್ ನಲ್ಲಿ ಈ ಕೊಲೆ ನಡೆದಿತ್ತು. ಈ ಮೂವರು ಬಸ್ ಗಳ ಸರ್ವಿಸ್ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.