ವಿಟ್ಲ: ಬೈಕಿಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದು ಉರುಳಿಬಿದ್ದ ಘಟನೆ ವಿಟ್ಲ-ಕಬಕ ರಸ್ತೆಯ ಕಂಬಳಬೆಟ್ಟು ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಬೈಕ್ ಸವಾರ ಅರ್ಕೆಜಾಲು ನಿವಾಸಿ ಯತೀಶ ಗಾಯಗೊಂಡಿದ್ದಾರೆ. ಕಾರು ಚಾಲಕ ಬೊಳಂತಿಮೊಗರು ನಿವಾಸಿ ಸನನ್ ಅಪಾಯದಿಂದ ಪಾರಾಗಿದ್ದಾರೆ. ವಿಟ್ಲ ಕಬಕ ರಸ್ತೆಯ ಕಂಬೆಟ್ಟುವಿನಲ್ಲಿ ಅರ್ಕೆಜಾಲು ಒಳರಸ್ತೆಯಿಂದ ಮುಖ್ಯ ರಸ್ತೆಗ ನುಗ್ಗಿದ ಬೈಕ್ ಅನ್ನು ತಪ್ಪಿಸಲು ಹೋಗಿ ಕಾರು ನಿಯಂತ್ರಣ ಕಳಕೊಂಡು ರಸ್ತೆ ಬದಿಯತ್ತ ಹೋಗಿ ಬಿದ್ದಿದೆ. ಇನ್ನೊಂದು ಭಾಗದಲ್ಲಿ ನಿಲ್ಲಿಸಿದ್ದ ಬೈಕ್ ಗೆ ಡಿಕ್ಕಿಯಾಗಿ ಅದು ಮಣ್ಣಿನ ದಿಬ್ಬದ ಮೇಲೆ ಬಿದ್ದಿದೆ.
ಗಾಯಗೊಂಡ ಬೈಕ್ ಸವಾರನನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಜಖಂ ಆಗಿದ್ದು, ಮರದ ಎಡೆಯಲ್ಲಿ ಸಿಲುಕಿಕೊಂಡಿದೆ. ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ