ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಗುಂಪೊಂದು ತಾಲ್ಲೂಕಿನ ಪಟ್ಟಣ ಗ್ರಾಮದ ರೌಡಿಶೀಟರ್ ಸೋಮು ತಾಳಿಕೋಟೆ (40) ಎಂಬಾತನನ್ನು ಮಂಗಳವಾರ ನಸುಕಿನ ಜಾವ ಕೊಲೆ ಮಾಡಿದೆ.
ಪಟ್ಟಣ ಗ್ರಾಮದಲ್ಲಿ ಕೊಲೆ ಮಾಡಿದ ಬಳಿಕ ಆಳಂದ ರಸ್ತೆಯ ರೈಲ್ವೆ ಹಳಿ ಬಳಿ ಬಿಸಾಕಿ ಹೋಗಿದ್ದಾರೆ.
ಕೆಲ ತಿಂಗಳ ಹಿಂದೆ ಪಟ್ಟಣ ಗ್ರಾಮದ ಕ್ರಾಸ್ ನಲ್ಲಿರುವ ಡ್ರೈವರ್ ದಾಬಾ ಮಾಲೀಕರ ಜೊತೆ ಸೋಮು ಗಲಾಟೆ ಮಾಡಿಕೊಂಡಿದ್ದ. ಹೀಗಾಗಿ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.