ಹಾವೇರಿಯಲ್ಲಿ ಹೋರಿ ಬೆದರಿಸುವ ವೇಳೆ ಅವಘಡ ಸಂಭವಿಸಿದೆ. ಘಟನೆಯಲ್ಲಿ ಓರ್ವನ ಕಣ್ಣು ಕಿತ್ತು ಬಂದಿದ್ದು, 30 ಮಂದಿಗೆ ಗಾಯಗಳಾಗಿದೆ.

ಹಾವೇರಿಯಲ್ಲಿ ರಾಕ್ ಸ್ಟಾರ್ ಹೋರಿ ನೆನಪಿಗಾಗಿ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯನ್ನು ನಾಗೇಂದ್ರನಮಟ್ಟಿಯ ವಿಶಾಲ ಮೈದಾನದಲ್ಲಿ ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಹೋರಿಗಳ ತಿವಿತದಿಂದ ಎದೆ ಹಾಗೂ ಕೈ ಕಾಲು ಸೇರಿ ವಿವಿಧ ಭಾಗಗಳಲ್ಲಿ ಗಾಯಗಳಾಗಿದೆ. ಘಟನೆಯಲ್ಲಿ ಓರ್ವ ವ್ಯಕ್ತಿಯ ಕಣ್ಣು ಗುಡ್ಡೆ ಕಿತ್ತು ಬಂದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೋರಿ ಬೆದರಿಸುವ ಸ್ಪರ್ಧೆ ನೋಡುಗರನ್ನು ಮೈ ನವಿರೇಳಿಸಿತ್ತು. ಸ್ಪರ್ಧೆಯಲ್ಲಿ ಗೆದ್ದವರಿಗೆ ಚಿನ್ನ ಸೇರಿದಂತೆ ಆಕರ್ಷಕ ಬಹುಮಾನ ನೀಡಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!