ಕೊಲ್ಲೂರು: ಕಾಂತಾರ ಚಿತ್ರದ ಜ್ಯೂನಿಯರ್ ಕಲಾವಿದರನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ ಪಲ್ಟಿಯಾದ ಪರಿಣಾಮ ಹಲವು ಮಂದಿ‌ ಗಾಯಗೊಂಡ ಘಟನೆ ಕೊಲ್ಲೂರು ಸಮೀಪದ ಜಡ್ಕಳ್ ಎಂಬಲ್ಲಿ ನ. 24ರ ರಾತ್ರಿ ವೇಳೆ ನಡೆದಿದೆ.

ಮುದೂರಿನಲ್ಲಿ ಕಾಂತಾರ ಚಾಪ್ಟರ್ 1 ಚಿತ್ರದ ಶೂಟಿಂಗ್ ಮುಗಿಸಿ 20 ಜ್ಯೂನಿಯರ್ ಕಲಾವಿದರನ್ನು ಕೊಲ್ಲೂರಿಗೆ ಕರೆದೊಯ್ಯುತ್ತಿದ್ದ ಬಸ್ ಪಲ್ಟಿಯಾಯಿತ್ತೆನ್ನಲಾಗಿದೆ.

ಇದರಿಂದ 6 ಮಂದಿ ತೀವ್ರ ಗಾಯಗೊಂಡಿದ್ದಾರೆ. ಇವರೆಲ್ಲ ಜಡ್ಕಲ್ ಮತ್ತು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕೊಲ್ಲೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!