ಬೆಂಗಳೂರು, (ನವೆಂಬರ್ 25): ಸ್ನಾನಕ್ಕೆ ಹೋಗಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಡೇಪೇಟೆಯಲ್ಲಿ ನಡೆದಿದೆ. ಲಕ್ಷ್ಮೀ (25) ಮೃತ ಮಹಿಳೆ. ಆಂಧ್ರದ ತಿರುಪತಿಯಿಂದ ಅಡೇಪೇಟೆಯಲ್ಲಿರುವ ಸಂಬಂಧಿಕರೊಬ್ಬರ ಮನೆಗೆ ಬಂದಿದ್ದ ಲಕ್ಷ್ಮೀ, ಇಂದು (ನವೆಂಬರ್ 25) ಸ್ನಾನಕ್ಕೆಂದು ಹೋಗಿದ್ದ ವೇಳೆ ಬಾತ್ರೂಮ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಆಂಧ್ರಪ್ರದೇಶದ ತಿರುಪತಿ ಮೂಲದ ಲಕ್ಷ್ಮೀ ತನ್ನ ಪತಿಯೊಂದಿಗೆ ಮಲ್ಲೇಶ್ವರಂನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಅಡೇಪೇಟೆಯಲ್ಲಿರುವ ಸಂಬಂಧಿ ಸುಹಾಸಿನಿ ಎಂಬುವವರ ಮನೆಗೆ ಪತಿ ಜೊತೆ ಹೋಗಿದ್ದು, ಬೆಳಗ್ಗೆ ಸ್ನಾನ್ಕಕೆಂದು ಹೋದಾಗ ಬಾತ್ರೂಮ್ನಲ್ಲೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಮನೆಯಲ್ಲಿಯೇ ಎಲ್ಲರೂ ಇದ್ದರು. ಸ್ನಾನಕ್ಕೆ ಹೋಗುವ ಮುನ್ನ ಲಕ್ಷ್ಮೀ ಮುಖದ ಮೇಲೆ ಏನೂ ಆಗಿರಲಿಲ್ಲ. ಯಾವುದೇ ಗಾಯದ ಗುರುತುಗಳೂ ಇರಲಿಲ್ಲ. ಆದ್ರೆ, ಸ್ನಾನಕ್ಕೆ ಹೋದ ಕೆಲವೇ ನಿಮಿಷಗಳಲ್ಲಿ ಸಾವನ್ಪಪಿದ್ದು, ಮುಖದಲ್ಲಿ ಪರಚಿರುವ ಗಾಯಗಳಾಗಿರುವುದು ಕಂಡುಬಂದಿದೆ. ಮನೆಗೆ ಯಾರೂ ಬಂದಿರಲಿಲ್ಲ, ಬಾತ್ರೂಮ್ನಲ್ಲಿ ಗ್ಯಾಸ್ ಗೀಸರ್ ಸಹ ಆನ್ ಆಗಿರಲಿಲ್ಲ. ಬಕೆಟ್‌ನಲ್ಲಿ ನೀರು ಸಹ ತುಂಬಿಸಿರಲಿಲ್ಲ, ಆದರೂ ಮಹಿಳೆ ಸ್ನಾನಗೃಹದಲ್ಲಿ ಬೆತ್ತಲೆಯಾಗಿ ಬಿದ್ದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಈ ಸಾವು ನೆಲಮಂಗಲ ಟೌನ್‌ ಪೊಲೀಸರಿಗೆ ತಲೆನೋವಾಗಿದೆ.

ಇನ್ನು ಈ ಸಾವಿನ ಸುತ್ತು ಅನುಮಾನಗಳು ಹುಟ್ಟಿಕೊಂಡಿದ್ದರಿಂದ ಪ್ರಕರಣ ದಾಖಲಿಸಿಕೊಂಡಿರುವ ನೆಲಮಂಗಲ ಟೌನ್ ಪೊಲೀಸರು, ಹಲವು ಆಯಾಮಗಳಲ್ಲಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಆದರೂ ಸಹ ಪ್ರಾಥಮಿಕ ತನಿಖೆಯಲ್ಲಿ ಸಾವಿನ ಕಾರಣ ಗೊತ್ತಾಗ್ತಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಎಲ್ಲಾ ಗೊತ್ತಾಗಲಿದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!