ಉಡುಪಿ: ವಿವಾಹಿತ ಮಹಿಳೆ ನಾಪತ್ತೆಯಾಗಿರುವ ಘಟನೆ ಪಡುಬಿದ್ರೆಯ ಉಚ್ಚಿಲ ಬಡಾ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಅಬ್ದುಲ್ ಅಜೀಜ್ ಅವರ ಪತ್ನಿ ಅಯಿಷಾ (33) ನಾಪತ್ತೆಯಾದವರು. ಆಯಿಷಾ ನ. 26ರಿಂದ ಮನೆ ಬಿಟ್ಟು ಹೋದವರು ಮರಳಿ ಮನಗೆ ಬಾರದೆ ನಾಪತ್ತೆಯಾಗಿರುವುದಾಗಿ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಯಿಯನ್ನು ಕರೆದುಕೊಂಡು ಅಬ್ದುಲ್ ಅಜೀಜ್ ಅವರು ನ. 26ರಂದು ಮಣಿಪಾಲದ ಆಸ್ಪತ್ರೆಗೆ ಹೋಗಿ ಮರಳಿ ಬರುವ ವೇಳೆ ಅಯಿಷಾ ಮನೆಯಲ್ಲಿ ಇರಲಿಲ್ಲ.

ಅಯಿಷಾ ಬಿಳಿ ಮೈಬಣ್ಣ ಹೊಂದಿದ್ದು, ಮುಖದಲ್ಲೊಂದು ಮಚ್ಚೆಯಿದೆ. 5.2 ಅಡಿ ಎತ್ತರವಿದ್ದು,  ಮರಾಠಿ, ಹಿಂದಿ, ಇಂಗ್ಲಿಷ್ ಹಾಗೂ ಬ್ಯಾರಿ ಭಾಷೆಯನ್ನು ಮಾತಾಡುತ್ತಾರೆ. ಈಕೆ ಬಗ್ಗೆ ಯಾರಿಗಾದರೂ ಸುಳಿವು ಲಭಿಸಿದ್ದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆ(0820 2555452)ಯನ್ನು ಸಂಪರ್ಕಿಸಲು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!