ಬೆಳ್ತಂಗಡಿ: ಮೃತ್ಯುಂಜಯ ಹೊಳೆಗೆ ಗೋ ತ್ಯಾಜ್ಯ ಎಸೆದ ಘಟನೆಯನ್ನು ಖಂಡಿಸಿ ಹಿಂದೂ ಸಂಘಟನೆಗಳಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಯಿತು.

ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ.ಪೊಲೀಸ್ ಇಲಾಖೆಯಿಂದ ಅನುಮತಿ ಸಿಗದ ಹಿನ್ನಲೆಯಲ್ಲಿ ಕಕ್ಕಿಂಜೆ ಪೇಟೆಯಲ್ಲಿನ ಖಾಸಗಿ ಜಾಗದಲ್ಲಿ ಪ್ರತಿಭಟನಾ ಸಭೆ ನಡೆಸಲಾಗಿದೆ.

ಪ್ರತಿಭಟನೆಯಲ್ಲಿ ಸಭೆಯಲ್ಲಿ ಬಜರಂಗದಳ ಮುಖಂಡ ಪುನೀತ್ ಅತ್ತಾವರ ಸೇರಿ ಹಲವರು ಭಾಗಿಯಾಗಿದ್ದು, ಕಕ್ಕಿಂಜೆ ಮತ್ತು ಚಾರ್ಮಾಡಿ ಭಾಗದ ನೂರಾರು ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಪುನೀತ್ ಅತ್ತಾವರ, ಕಕ್ಕಿಂಜೆ ಗ್ರಾಮದ ಅಕ್ರಮ ಕಸಾಯಿ ಖಾನೆಗಳನ್ನು ಪೊಲೀಸರು ಕೂಡಲೇ ಬಂದ್ ಮಾಡಿಸದಿದ್ದರೆ ಕಸಾಯಿಖಾನೆಗಳ ಮೇಲೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನೇರ ಕಾರ್ಯಾಚರಣೆ ನಡೆಸುವುದಾಗಿ ಹೇಳಿದ್ದಾರೆ.

ಅಲ್ಲದೇ, ಕಾನೂನು ಮತ್ತು ಸುವ್ಯವಸ್ಥೆಗೆ ಸಮಸ್ಯೆಯಾದರೆ ಪೊಲೀಸರು ಮತ್ತು ರಾಜ್ಯ ಸರ್ಕಾರ ಹೊಣೆಯಾಗಬೇಕಾಗುತ್ತದೆ, ಗೋ ಹತ್ಯೆ ಮುಂದುವರಿಸಿದರೆ ಬಜರಂಗದಳ ಫೀಲ್ಡ್ ಗೆ ಇಳಿಯುತ್ತದೆ ಎಂದು ಪುನೀತ್ ಅತ್ತಾವರ ಎಚ್ಚರಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!