
ರಾಜ್ಯ ಸರಕಾರವು ಕೆಎಸ್‌ಆರ್‌ಟಿಸಿ ಬಸ್ಸುಗಳ ಟಿಕೆಟ್ ದರವನ್ನು ಏರಿಸಿದ ಬೆನ್ನಲ್ಲೇ ದ.ಕ.ಜಿಲ್ಲೆಯ ವಿವಿಧ ರೂಟ್‌ಗಳಲ್ಲಿ ಸಂಚರಿಸುವ ಕಾಂಟ್ರಾಕ್ಟ್ ಕ್ಯಾರೇಜ್(ಖಾಸಗಿ) ಬಸ್ಸುಗಳ ಪ್ರಯಾಣ ದರವನ್ನೂ ಏರಿಸಲಾಗಿದೆ.
ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳಲ್ಲಿ ಜ. 7ರಿಂದಲೇ ಟಿಕೆಟ್ ದರ ಏರಿಸಲಾಗಿದೆ. ಮಂಗಳೂರಿನಿಂದ ಪ್ರತ್ಯೇಕ ರೂಟ್‌ಗಳಲ್ಲಿ ಪುತ್ತೂರು, ಉಪ್ಪಿನಂಗಡಿ, ವಿಟ್ಲ ಭಾಗಕ್ಕೆ ಈ ಬಸ್ಸುಗಳು ಓಡುತ್ತಿದ್ದು, ಇದೇ ರೂಟ್‌ನಲ್ಲಿ ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್ಸುಗಳೂ ಸಂಚರಿಸುತ್ತಿವೆ.
ದರ ಏರಿಕೆ ಕುರಿತು ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಜಯರಾಮ್ ಶೇಖ ಪ್ರತಿಕ್ರಿಯಿಸಿ, ನಾವು ಉಳಿದ ಬಸ್ಸುಗಳಿಗಿಂತ ಹೆಚ್ಚಿನ ಮೊತ್ತದ ತೆರಿಗೆಯನ್ನು ಪಾವತಿಸುತ್ತಿದ್ದು, ಹೀಗಾಗಿ ದರ ಏರಿಕೆ ಅನಿವಾರ್ಯವಾಗಿದೆ ಎಂದಿದ್ದಾರೆ.






