ತಾಯಿ ಜೀವಂತ ಇರುವಾಗಲೇ ಪಾಪಿ ಪುತ್ರನೋರ್ವ ಆಸ್ತಿಗಾಗಿ ಸುಳ್ಳು ಅರ್ಜಿ ನೀಡಿ ತಾಯಿಯ ಡೆತ್ ಸರ್ಟಿಫಿಕೇಟ್ ಪಡೆದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಡೆದಿದೆ.

ಬಂಧಿತನನ್ನು ಹುಬ್ಬಳ್ಳಿಯ ಶೌಕತ್ ಅಲಿ (39) ಎಂದು ಗುರುತಿಸಲಾಗಿದೆ. ಮರಣ ಪ್ರಮಾಣಪತ್ರ ನೀಡಿದ ಪುರಸಭೆ ಅಧಿಕಾರಿಗೂ ನೋಟಿಸ್ ನೀಡಲಾಗಿದೆ.

ಘಟನೆ ಹಿನ್ನೆಲೆ

ಶೌಕತ್ ಅಲಿ ತಂದೆ 2001ರಲ್ಲಿ ಮೃತಪಟ್ಟಿದ್ದರು. ಶೌಕತ್ ಕಳೆದ 10 ವರ್ಷಗಳಿಂದ ಹುಬ್ಬಳ್ಳಿ ಯಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದನು. ಪುತ್ರ ಹಾಗೂ ಆತನ ತಾಯಿ ಹೂರಾಂಬಿ ಜಂಗ್ಲಿಸಾಬ್ ಎಂಬುವರ ಹೆಸರಿನಲ್ಲಿ 2 ಎಕರೆ ಜಮೀನು ಜಂಟಿ ಖಾತೆಯಲ್ಲಿತ್ತು. ಆಸ್ತಿ ಕಬಳಿ ಸುವ ಉದ್ದೇಶದಿಂದ ಶೌಕತ್ ಮರಣ ಪ್ರಮಾಣ ಪತ್ರವನ್ನು ಪಡೆದಿದ್ದಾನೆ. ಈ ವಿಷಯ ತಿಳಿದ ಆತನ ತಾಯಿ ಪೊಲೀಸರಿಗೆ ದೂರು ನೀಡಿದ್ದರು.ಸದ್ಯ, ಶೌಕತ್ ಅಲಿಯನ್ನು ಪೊಲೀಸರು ಬಂಧಿಸಿ ತನಿಖೆಗೊಳಡಪಡಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!