
ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದ 10 ಕೆಜಿ ತೂಕದ, ಸುಮಾರು ₹8,000 ಮೌಲ್ಯದ ತಾಮ್ರದ ಗಂಟೆ ಕಳವು ಪ್ರಕರಣವನ್ನು ಪೊಲೀಸರು ಬಯಲು ಮಾಡಿದ್ದಾರೆ.
ಜುಲೈ 26, 2025 ರಂದು ದಾಖಲಾದ ಅ.ಕ್ರ 63/2025, ಕಲಂ 303(2) BNS 2023 ರಂತೆ ನಡೆಸಿದ ತನಿಖೆಯಲ್ಲಿ, ಪುತ್ತೂರು ಕಬಕ ನಿವಾಸಿ ಸಂಶುದ್ದೀನ್ @ ಸಂಶು (50) ಎಂಬಾತನನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಹಿಂದೆ 2004ರಲ್ಲಿ ಪುತ್ತೂರು ನಗರ ಠಾಣಾ ಅ.ಕ್ರ 83/2004, ಕಲಂ 454, 380 ಐಪಿಸಿ ಪ್ರಕರಣದಲ್ಲೂ ಆರೋಪಿ ಆಗಿದ್ದುದಾಗಿ ಪೊಲೀಸರು ತಿಳಿಸಿದ್ದಾರೆ.






