ಪುತ್ತೂರು: ರೋಟರಿ ಕ್ಲಬ್ ಪುತ್ತೂರು, ಪುತ್ತೂರು ರೋಟರಿ ಮ್ಯಾಮೋಗ್ರಫಿ ಸೆಂಟರ್, ರೋಟರಿ ಕ್ಲಬ್ ಪುತ್ತೂರು, ಪ್ರಗತಿ ಸ್ಪೆಷಾಲಿಟಿ ಹಾಸ್ಪಿಟಲ್, ಜ್ಞಾನ ವಿಕಾಸ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಿರಂತರ ಮಾಸಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವು ಫೆ.1ರಂದು ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೊಳುವಾರುನಲ್ಲಿರುವ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆಯಲಿದೆ.

ಶಿಬಿರದಲ್ಲಿ ರಕ್ತದೊತ್ತಡ ಪರೀಕ್ಷೆ, ಬಿ.ಪಿ. ಪರೀಕ್ಷೆ, ಮಧುಮೇಹ, ಸಕ್ಕರೆ ಕಾಯಿಲೆ ಪರೀಕ್ಷೆ, ಥೈರಾಯಿಡ್ ಪರೀಕ್ಷೆ, ಮಕ್ಕಳ ತಪಾಸಣಾ ಶಿಬಿರ, ಆಸ್ತಮ, ಶ್ವಾಸಕೋಶ ಸಂಬಂಧಿ ಕಾಯಿಲೆಯ ತಪಾಸಣೆಗಾಗಿ ಸ್ಟೆರೋಮಿಟ್ರಿ ಪರೀಕ್ಷೆ, ಹೃದಯ ತಪಾಸಣೆಗಾಗಿ ಇಸಿಜಿ ಸೇವ್ ಹಾರ್ಟ್ ಪರೀಕ್ಷೆ, ಹಿಮೋಗ್ಲೋಬಿನ್ ಪರೀಕ್ಷೆ, ಕೊಲೆಸ್ಟ್ರಾಲ್ ತಪಾಸಣೆಗಾಗಿ ಲಿಪಿಡ್ ಪ್ರೊಫೈಲ್ ಪರೀಕ್ಷೆ, ಸ್ತನ ಕಾಯಿಲೆ ಪತ್ತೆಯ ಪರೀಕ್ಷೆ ನಡೆಸಲಾಗುವುದು.

ಬಿಪಿಎಲ್ ಕಾರ್ಡ್‌ದಾರರಿಗೆ ಸ್ತನ ಕಾಯಿಲೆ ಪತ್ತೆಯ ಪರೀಕ್ಷೆ (ಮ್ಯಾಮೋಗ್ರಫಿ) ಉಚಿತ ಹಾಗೂ ಉಳಿದವರಿಗೆ ರಿಯಾಯಿತಿ ದರದಲ್ಲಿ ಮಾಡಲಾಗುವುದು. ಬರುವಾಗ ಬಿಪಿಎಲ್ ಕಾರ್ಡ್ ಕಡ್ಡಾಯವಾಗಿ ತರಬೇಕಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9483127777, 9448126326, 9483787876 ಸಂಪರ್ಕಿಸಬಹುದಾಗಿದೆ ಎಂದು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಯು ಶ್ರೀಪತಿ ರಾವ್ ಹಾಗೂ ರೋಟರಿ ಕ್ಲಬ್‌ ಪುತ್ತೂರು ಇದರ ಅಧ್ಯಕ್ಷಡಾ. ಶ್ರೀಪ್ರಕಾಶ್ ಬಿ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!