
ಅಮೆರಿಕ (America), ಇರಾನ್ (Iran) ಹಾಗೂ ಇಸ್ರೇಲ್ (Israel) ನಡುವಿನ ಯುದ್ಧ ತೀವ್ರ ಸ್ಪರೂಪ ಪಡೆದುಕೊಂಡಿದೆ. ಇಸ್ರೇಲ್ ಜೊತೆ ಸೇರಿ ಅಮೆರಿಕ ಕೂಡ ದಾಳಿ ನಡೆಸುತ್ತಿದೆ. ಇದರ ಮಧ್ಯೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.
ಫೆಬ್ರವರಿ 28ರಂದು ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಸೇರಿದಂತೆ ಇಡೀ ಕುಟುಂಬವೇ ಹತ್ಯೆಯಾಗಿತ್ತು. ಆದರೆ ಇರಾನ್ ಯಾವುದೇ ಶರಣಾಗತಿಗೆ ಒಪ್ಪಂದೆ ಪ್ರತಿ ದಾಳಿ ನಡೆಸುತ್ತಲೇ ಇದೆ. ಖಮೇನಿ ಹತ್ಯೆ ಬಳಿಕ ಇರಾನ್ ಪ್ರತೀಕಾರವಾಗಿ ನಡೆಸಿದ ದಾಳಿಯಲ್ಲಿ ಇಸ್ರೇಲ್ ಪ್ರಧಾನಿ ಬೆಂಬಮಿನ್ ನೇತನ್ಯಾಹು ಹತ್ಯೆಯಾಗಿದ್ದಾರಾ? ಈ ಅನುಮಾನಗಳು ಹೆಚ್ಚಾಗುತ್ತಿದೆ.
ಇಸ್ರೇಲ್-ಇರಾನ್ ಯುದ್ಧದ ಬಳಿಕ ನೇತನ್ಯಾಹು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾ ಮೂಲಕ ಪೋಸ್ಟ್‌ಗಳು ಕಾಣಿಸುತ್ತಿದೆ. ಇದೀಗ ಮಾರ್ಚ್ 13ರಂದು ಪ್ರಕಟಿಸಲಾದ ವಿಡಿಯೋ ಒಂದು ನೇತನ್ಯಾಹು ಕುರಿತು ಅನುಮಾನ ಹೆಚ್ಚಿಸಿದೆ.
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹುರವರ ಇತ್ತೀಚಿನ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಸಾವಿರಾರು ಬಳಕೆದಾರರು ಈ ವಿಡಿಯೋವನ್ನು ಕೃತಕ ಬುದ್ಧಿಮತ್ತೆ (AI) ಯನ್ನು ಬಳಸಿಕೊಂಡು ಮಾಡಿರಬಹುದು, ಇಲ್ಲವೇ ಅಸಲಿ ವಿಡಿಯೋವನ್ನು ಬದಲಾಯಿಸಿರಬಹುದು ಎಂದು ಹೇಳುತ್ತಿದ್ದಾರೆ.
6 ಬೆರಳಿನಿಂದ ಹೆಚ್ಚಿದ ಅನುಮಾನ
ಬೆಂಜಮಿನ್ ನೇತನ್ಯಾಹು ಮಾರ್ಚ್ 13ರಂದು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಒಂದನನ್ನು ಪೋಸ್ಟ್ ಮಾಡಿದ್ದಾರೆ. ಕಳೆದ 15 ದಿನಗಳಿಂದ ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸುತ್ತಿದೆ. ಫೆಬ್ರವರಿ 28ರ ದಾಳಿಯಲ್ಲಿ ಇರಾನ್ ನಾಯಕ ಆಯತೊಲ್ಲ ಅಲಿ ಖಮೇನಿ ಹತ್ಯೆಯಾಗಿದ್ದಾರೆ ಎಂದು ವಿಡಿಯೋ ಮೂಲಕ ಹೇಳಿದ್ದಾರೆ.
ನೇತನ್ಯಾಹು ಎಲ್ಲಿ ಎಂದು ಕೇಳುತ್ತಿದ್ದ ಹಲವರಿಗೆ ಉತ್ತರವಾಗಿ ಈ ವಿಡಿಯೋ ಪೋಸ್ಟ್ ಮಾಡಲಾಗಿತ್ತು. ಆದರೆ ಇದೇ ವಿಡಿಯೋದಲ್ಲಿ ಕೆಲ ಬಳಕೆದಾರರು ಅನುಮಾನಗಳು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋದಲ್ಲಿ ನೇತನ್ಯಾಹು ಬಲಗೈ ಬೆರಳು 6 ಇದೆ. ಇದು ಎಐ ವಿಡಿಯೋ ಮಾಡಿ ಪೋಸ್ಟ್ ಮಾಡಲಾಗಿದೆ ಎಂಬ ಅನುಮಾನವನ್ನು ಸೋಶಿಯಲ್ ಮೀಡಿಯಾ ಮೂಲಕ ವ್ಯಕ್ತಪಡಿಸಿದ್ದಾರೆ.
ವಿಡಿಯೋದ ಅಸಲಿಯತ್ತೇನು?
Classic AI finger glitch and ‘look closely at his hand ಎಂಬ ಶೀರ್ಷಿಕೆಯಡಿ ಈ ವಿಡಿಯೋವನ್ನು AI ನಿಂದ ಎಡಿಟ್ ಮಾಡಲಾಗಿದೆಯೇ ಎಂದು ಪ್ರಶ್ನಿಸುವ ಪೋಸ್ಟ್‌ಗಳಿಗೆ ಲಕ್ಷಾಂತರ ವೀಕ್ಷಣೆಗಳು ಬಂದಿವೆ. ಅನೇಕ ಬಳಕೆದಾರರು, ನೆತನ್ಯಾಹು ಸತ್ತಿದ್ದಾರೆ ಎಂದು ಹೇಳಿದ್ದಾರೆ. ಅಂತಹ ಪೋಸ್ಟ್‌ಗಳ ಕುರಿತು X ನ AI ಚಾಟ್‌ಬಾಟ್ ಗ್ರೋಕ್ ಪರಿಶೀಲಿಸಿದ್ದು, ಸುಳ್ಳು ಎಂದು ಹೇಳಿದೆ.
ಸೋಶಿಯಲ್ ಮೀಡಿಯಾ ಮೂಲಕ ಈ ವಿಡಿಯೋ ಹಾಗೂ ಕೆಲ ಸ್ಕ್ರೀನ್‌ಶಾಟ್ ಹಂಚಿಕೊಳ್ಳುವ ಮೂಲಕ ನೇತನ್ಯಾಹು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂಬ ವರದಿಗಳನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಈ ಸುದ್ದಿಯನ್ನು ಹಲವು ಫ್ಯಾಕ್ಟ್ ಟೆಕ್ ಸಂಸ್ಥೆಗಳು ಅಲ್ಲಗೆಳೆದಿದೆ. ನೇತನ್ಯಾಹು ಸುರಕ್ಷಿತವಾಗಿದ್ದಾರೆ ಎಂದು ವರದಿ ನೀಡಿದೆ.
ಅಮೆರಿಕದ ಕನ್ಸರ್ ವೇಟಿವ್ ಪೊಲಿಟಿಕಲ್ ಕಾಮೆಂಟರ್ ಕ್ಯಾಂಡೇಸ್ ಓವೆನ್ಸ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬೀಬಿ ಎಲ್ಲಿ? ಎಂದು ಕೇಳಿದ್ದಾರೆ. ನೆತನ್ಯಾಹು ಅವರನ್ನು ಈ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. ಇಸ್ರೇಲ್ ಪ್ರಧಾನಿ ಕಾರ್ಯಾಲಯ ನಕಲಿ AI ವೀಡಿಯೊಗಳನ್ನು ಯಾಕೆ ಬಿಡುಗಡೆ ಮಾಡಿ, ಡಿಲೀಟ್ ಮಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.









