ಪುತ್ತೂರು, ಏ.4: ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಅನ್ನದಾನ ಕಾರ್ಯಕ್ಕಾಗಿ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯಿಂದ ಸುವಸ್ತುಗಳನ್ನು ವಸ್ತುರೂಪದಲ್ಲಿ ಸಮರ್ಪಿಸಲಾಯಿತು.
ಸುಮಾರು ರೂ.73 ಸಾವಿರ ಮೌಲ್ಯದ ಅಕ್ಕಿ, ಬೆಲ್ಲ, ಸಕ್ಕರೆ, ಕಡಲೆಬೇಳೆ, ತೊಗರಿಬೇಳೆ ಹಾಗೂ ಕೊತ್ತಂಬರಿ ಸೇರಿದಂತೆ ವಿವಿಧ ಸುವಸ್ತುಗಳನ್ನು ದೇವರಿಗೆ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ವೇ.ಮೂ.ವಿ.ಎಸ್. ಭಟ್ ಅವರು ವಿಶೇಷ ಪ್ರಾರ್ಥನೆ ನೆರವೇರಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸಮಿತಿಯ ಸದಸ್ಯರು ಹಾಗೂ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿಯ ಸದಸ್ಯರುಗಳಾದ ಮೋಹನ್ ಪೂಜಾರಿ (ತೆಂಕಿಲ), ಅನಿಲ್ ಕುಮಾರ್ (ಕಣ್ಣರ್ ನೋಜಿ), ಬಾಲಚಂದ್ರ ಸೊರಕೆ, ಹರಿಪ್ರಸಾದ್ ಶೆಟ್ಟಿ (ನೆಲ್ಲಿಕಟ್ಟೆ), ಬಾಲಕೃಷ್ಣ ರೈ, ಪಿ.ಜಿ. ಚಂದ್ರಶೇಖರ್ ರಾವ್, ಹರಿಚಂದ್ರ (ಪಕ್ಕಳ ದರ್ಬೆ), ಮೋಹನ್ ಕೆ., ಶ್ರೀಧರ್ ಪೂಜಾರಿ (ಹಿಂದರ್), ರತ್ನ ನಾಯರ್, ಹರೀಶ್ (ಮಿನಿಪದವು), ವಾಸುದೇವ ಆಚಾರ್ಯ, ಜಯರಾಮ್ ರೈ (ಆರ್ಲಪದವು), ಕೃಷ್ಣ ನಾಯ್ಕ, ಪದ್ಮನಾಭ ಅಂದ್ರಟ್, ರಮೇಶ್ ಆಚಾರ್ಯ, ಉಮೇಶ್ ರಾವ್ ಉಪಸ್ಥಿತರಿದ್ದರು.
ಮಹಾಲಿಂಗೇಶ್ವರ ದೇವಸ್ಥಾನದ ಸಂರಕ್ಷಣಾ ಸಮಿತಿ ಸದಸ್ಯರು ಪ್ರತೀ ತಿಂಗಳು ಸುಮಾರು ರೂ. 30 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಅನ್ನಪ್ರಸಾದಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಸಮರ್ಪಿಸುತ್ತಾ ಬರುತ್ತಿದ್ದಾರೆ.
ಈ ಬಾರಿ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಪ್ರಯುಕ್ತ ಸುಮಾರು ರೂ. 73 ಸಾವಿರ ಮೌಲ್ಯದ ಅನ್ನಪ್ರಸಾದಕ್ಕೆ ಬೇಕಾದ ಸುವಸ್ತುಗಳನ್ನು ಭಕ್ತಿಭಾವದಿಂದ ಸಮರ್ಪಿಸಿದ್ದಾರೆ.














