ಪುತ್ತೂರು: ದೇಶಕ್ಕೆ ಶಕ್ತಿ ತುಂಬುವ ಕಾರ್ಯ ಪ್ರತಿಯೊಬ್ಬರಿಂದ ನಡೆಯಬೇಕಾಗಿದೆ. ಜನಾಂಗಳು ಉದ್ಧಾರವಾದಾಗ ದೇಶ ಪ್ರಗತಿಗೊಳ್ಳುತ್ತದೆ. ದೇಶ ಸೇವೆ ಹಾಗೂ ನಾಡನ್ನು ಕಟ್ಟು ಕಾರ್ಯಕ್ಕೆ ಒಕ್ಕಲಿಗ ಸಮುದಾಯದ ಕೊಡುಗೆ ಅಪಾರವಾಗಿದೆ. ಆರ್ಥಿಕ ಸ್ವಾವಲಂಬಿತನ ಬದುಕಿನ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತೆಂಕಿಲ ಗೌಡ ಸಮುದಾಯಭವನದಲ್ಲಿ ಶನಿವಾರ ಪುತ್ತೂರು ಒಕ್ಕಲಿಗ ಗೌಡಸಂಘ ಹಾಗೂ ಸಹಸಂಸ್ಥೆಗಳ ಆಶ್ರಯದಲ್ಲಿ ನಡೆದ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ ಅಂಗವಾಗಿ ನೂತನ ಸಭಾಭವನವನ್ನು ಲೋಕಾರ್ಪಣೆಗೊಳಿ, ಸಾರ್ವಜನಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಸಭಾಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸ್ವಸಹಾಯ ಯೋಜನೆಯನ್ನು ವಿಸ್ತರಣೆ ಮಾಡುವ ಕೆಲಸ ಮಾಡಬೇಕಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವಿಕೆಯಿದ್ದಾಗ ಸಮುದಾಯ ಪೂರ್ಣ ಪ್ರಮಾಣದಲ್ಲಿ ಹರಡಿಕೊಳ್ಳಲು ಸಾಧ್ಯವಾಗುತ್ತದೆ. ಒಕ್ಕಲಿಗ ಸಮುದಾಯದಿಂದಲೂ ಜ್ಞಾನಿಗಳು, ವಿಜ್ಞಾನಿಗಳು ಸಾಹಿತಿಗಳು ಸಹಿತ ವಿವಿಧ ಕ್ಷೇತ್ರಗಳಿಂದ ಸಾಧಕರು ಬರಬೇಕು ಎಂದರು
ಮಂಗಳೂರು ಆದಿಚುಂಚನಗಿರಿ ಶಾಖಾ ಮಠದ ಡಾ. ಧರ್ಮಪಾಲನಾಥ ಶ್ವಾಮೀಜಿ ಆಶೀರ್ವಚನ ನೀಡಿ “ಪುತ್ತೂರಿನ ಒಕ್ಕಲಿಗ ಸಂಘಟನೆ ಸಮಾಜದ ರ್ವ ಸಂಘಟನೆಗಳಿಗೂ ಮಾದರಿ. ಸ್ವಸಹಾಯ ಟ್ರಸ್ಟ್ ನ ಹಿರಿಯ ಆರ್ಶ ದಂಪತಿಗಳ ಮನೆಗೆ ತೆರಳಿ ಅವರ ಹೃದಯವನ್ನು ತಟ್ಟುವ ಕೆಲಸ ಮಾಡಿರುವುದು ಶ್ಲಾಘನೀಯ ಎಂದರು
ಬದುಕು ಅರ್ಥಹೀನವಾಗದಂತೆ ಮನುಷ್ಯ ಜೀವನಾನ್ವೇಷನೆಗೆ ಮೊದಲ ಆದ್ಯತೆ ನೀಡಬೇಕು. ಸಮಾಜದಲ್ಲಿ ಗುರುತಿಸಿಕೊಳ್ಳುವ ಮೂಲಕ ತಮ್ಮ ಅಸ್ಮಿಮತೆಯನ್ನು ಉಳಿಸಿಕೊಳ್ಳುವ ಕೆಲಸಕ್ಕೆ ಸಂಘಟನೆಗಳು ಆಸಕ್ತಿವಹಿಸಬೇಕಾಗಿದೆ. ಆಧುನಿಕ ಆವಿಷ್ಕಾರಗಳ ನಡುವೆ ಕಲ್ಮಷಗೊಳ್ಳುತ್ತಿರುವ ಮನಸ್ಸುಗಳಿಗೆ ಹಿರಿಯರ ಮಾರ್ಗದರ್ಶನ ಅತೀ ಅಗತ್ಯ. ಪುತ್ತೂರು ಒಕ್ಕಲಿಗ ಸಂಘ ಸ್ವಸಹಾಯ, ಸಹಕಾರಿ ಸಂಘಗಳ ಮೂಲಕ ಸಮಾಜಕ್ಕೆ ಮಾದರಿಯಾಗಿ ನಿಂತಿದೆ ಎಂದರು.
ಅಖಿಲ ಕರ್ನಾಟಕ ಮಹಿಳಾ ಒಕ್ಕಲಿಗರ ಘಟಕದ ರಾಜ್ಯಾಧ್ಯಕ್ಷೆ ಡಾ.ಶಾಂತ ಸುರೇಂದ್ರ ಗೌಡ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮುಖ್ಯ ಪ್ರವರ್ತಕ ನ್ಯಾಯವಾದಿ ಮೋಹನ್ ಗೌಡ ಇಡ್ಯಡ್ಕ, ಶಮಾನೋತ್ಸವ ಸಮಿತಿ ಅಧ್ಯಕ್ಷ ಪಟೇಲ್ ಗೋಪಾಲಕೃಷ್ಣ ಗೌಡ ಚಾರ್ವಾಕ, ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಎ ವಿ ನಾರಾಯಣ, ಟ್ರಸ್ಟ್ ಅಧ್ಯಕ್ಷ ಡಿ ವಿ ಮನೋಹರ್ ಮಾತನಾಡಿದರು.
ಉದ್ಯಮಿ ಕುಶಾಲಪ್ಪ ಗೌಡ, ನಿವೃತ್ತ ಶಿಕ್ಷಕಿ ವಸಂತಿ, ರಾಷ್ಟçಮಟ್ಟದ ಕ್ರೀಡಾಪ್ರತಿಭೆ ಕೀರ್ತಿ ಗುಮ್ಮಟೆಗದ್ದೆ ಅವರನ್ನು ಸನ್ಮಾನಿಸಲಾಯಿತು. ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಸ್ವಾಮೀಜಿ ಗೌರವಿಸಿದರು.
ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಕೆ ಎಸ್, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಗೌಡ ಮಹಿಳಾ ಸಂಘದ ಅಧ್ಯಕ್ಷ ವಾರಿಜ ಕೆ, ಯುವ ಗೌಡ ಸೇವಾ ಸಂಘದ ಅಧ್ಯಕ್ಷ ಅಮರನಾಥ್, ಟ್ರಸ್ಟ್ ನ ಕಾರ್ಯದರ್ಶಿ ದಿವ್ಯಪ್ರಸಾದ್, ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಗೌಡ ಕೆ ಉಪಸ್ಥಿತರಿದ್ದರು.
ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಸಂಜೀವ ಮಠಂದೂರು ಸ್ವಾಗತಿಸಿ, ಪ್ರಸ್ತಾವನೆಗೈದರು. ಒಕ್ಕಲಿಗ ಗೌಡ ಸೇವಾ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ರವಿ ಮುಂಗ್ಲಿಮನೆ ವಂದಿಸಿದರು. ವಸಂತ ವೀರಮಂಗಲ ಮತ್ತು ಸೀತಾರಾಮ ಕೇವಳ ಕಾರ್ಯಕ್ರಮ ನಿರೂಪಿಸಿದರು.

















