Month: August 2025

ಪುತ್ತೂರು :ಲಿಟ್ಲ್ ಫ್ಲವರ್ ಶಾಲೆಯಲ್ಲಿ ಶೈಕ್ಷಣಿಕ ಸಂಘಗಳ ಉದ್ಘಾಟನೆ

ಪುತ್ತೂರು: ದರ್ಬೆಯ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಶಾಲಾ ಶೈಕ್ಷಣಿಕ ಸಂಘಗಳ ಉದ್ಘಾಟನಾ ಕಾರ್ಯಕ್ರಮವು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ.ಎಸ್. ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಗ್ರಾಫಿಕ್ ಡಿಸೈನರ್ ಹಾಗೂ ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಶ್ರೀ ಮಂಜುನಾಥ್ ಉದ್ಘಾಟಿಸಿ…

ಮೈಸೂರು ದಸರಾ ಉದ್ಘಾಟನೆ ವಿವಾದ – ಬಾನು ಮುಷ್ತಾಕ್ ಸ್ಪಷ್ಟನೆ – ಟೀಕಾಕಾರರಿಗೆ ತಿರುಗೇಟು -ಬಿಜೆಪಿ ಪಕ್ಷದಲ್ಲಿ ಸಂಸದ ಯದುವೀರ್ ಅಂತಹವರ ಸಂತತಿ ಹೆಚ್ಚಾಗಲಿ..!!

ಮೈಸೂರು ದಸರಾ (Mysuru Dasara)ಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ, ಈ ಬಾರಿ ದಸರಾ ಉದ್ಘಾಟಕರ ಆಯ್ಕೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ (Banu Mushtaq) ಅವರನ್ನು ಉದ್ಘಾಟನೆಗೆ ಆಹ್ವಾನಿಸಿರುವುದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ವಿರೋಧಕ್ಕೆ…

ಬಿಜೆಪಿ ಪಕ್ಷದಲ್ಲಿ ಮೈಸೂರಿನ ಸಂಸದ ಯದುವೀರ್ ಅಂತಹವರ ಸಂತತಿ ಹೆಚ್ಚಾಗಲಿ ಎಂದು ಅಪೇಕ್ಷೆ ಪಡುತ್ತೇನೆ . ಒಂದು ಸಮತೋಲನದಿಂದ ವಿಷಯ ಅನ್ವೇಷಣೆ ಮಾಡಿ ಆ ಬಗ್ಗೆ ದ್ವಂದ್ವ ಇಲ್ಲದೆ ಹೇಳಿಕೆ ನೀಡಬೇಕು. ಅಂತಹ ವಿದ್ಯಾವಂತ ಸುಸಂಸ್ಕೃತ ಮನಸುಗಳಿಗೆ ಮಾತ್ರ ಸಾಧ್ಯ. ಬೂಕರ್…

ಕಾರ್ಕಳ: ಮಹಿಳೆಯ ಗೆಳೆತನದ ವಿಚಾರಕ್ಕೆ ಕೊಲೆ – ಆರೋಪಿ ಬೆಳ್ತಂಗಡಿ ಮೂಲದ ಪರೀಕ್ಷಿತ್ ಬಂಧನ

ಕಾರ್ಕಳ, ಆ.26 :ಮಹಿಳೆಯ ಗೆಳೆತನದ ವಿಚಾರವಾಗಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಲ್ಪಾಡಿ ಎಂಬಲ್ಲಿ ನಸುಕಿನ ವೇಳೆ ನಡೆದಿದೆ. ಮೃತರನ್ನು ಮಂಗಳೂರು ಮೂಲದ ನವೀನ್ ಪೂಜಾರಿ ಎಂದು ಗುರುತಿಸಲಾಗಿದ್ದು, ಕೊಲೆ ಆರೋಪಿ…

ಆ. 27ರಿಂದ ಭಾರತದ ಸರಕುಗಳ ಮೇಲೆ ಶೇ50 ಸುಂಕ: ಅಮೆರಿಕದಿಂದ ಕರಡು ಆದೇಶ ಬಿಡುಗಡೆ

ವಾಷಿಂಗ್ಟನ್: ಆಗಸ್ಟ್ 27ರಿಂದ ಜಾರಿಗೆ ಬರುವಂತೆ ಭಾರತೀಯ ಉತ್ಪನ್ನಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದ ಹೆಚ್ಚುವರಿ ಶೇ 25 ರಷ್ಟು ಸುಂಕವನ್ನು ಜಾರಿಗೆ ತರುವ ಯೋಜನೆಗಳನ್ನು ವಿವರಿಸುವ ಕರಡು ಆದೇಶವನ್ನು ಅಮೆರಿಕ ಹೊರಡಿಸಿದೆ. ಆಗಸ್ಟ್‌ 27ರ ಮಧ್ಯರಾತ್ರಿ 12.01ರಿಂದ…

ಬಡವರ ಕೆಲಸ ಮಾಡುವಲ್ಲಿ ತೀವ್ರ ಉದಾಸೀನ-ಬಂಟ್ವಾಳ ತಹಶಿಲ್ದಾರ್ ಸಹಿತ ಹಲವು ಕಂದಾಯ ಅಧಿಕಾರಿಗಳ ಎತ್ತಂಗಡಿ: ಶಾಸಕ ಅಶೋಕ್ ರೈ..!!?

ಪುತ್ತೂರು: ಅಕ್ರಮ ಸಕ್ರಮ ಕಡತವಿಲೇವಾರಿ, 94 ಸಿ, 94 ಸಿ ಸಿ ಕಡತ ವಿಲೇವಾರಿ ಮಾಡುವಲ್ಲಿ ತೀವ್ರ ಉದಾಸೀನತೆ ತೋರಿ ಬಡವರ ಕೆಲಸ ಮಾಡುವಲ್ಲಿ ವಿಫಲವಾಗಿರುವ ಬಂಟ್ವಾಳ ತಹಶಿಲ್ದಾರ್ ಸಹಿತ ಕೆಲವು ಕಂದಾಯ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುವುದು ಎಂದು ಶಾಸಕ ಅಶೋಕ್…

ರೆಂಜ: ಕರ್ನಾಟಕ ಮುಸ್ಲಿಂ ಜಮಾಅತ್ ವತಿಯಿಂದ “ಸ್ವಾತಂತ್ರ್ಯ ಸೌಹಾರ್ದ ಸಂಗಮ

ಪುತ್ತೂರು : ಕರ್ನಾಟಕ ಮುಸ್ಲಿಂ ಜಮಾಅತ್ ರೆಂಜ ಸರ್ಕಲ್ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ “ಸ್ವಾತಂತ್ರ್ಯ ಸೌಹಾರ್ದ ಸಂಗಮ” ಕಾರ್ಯಕ್ರಮ ಸಂಘದ ಕಛೇರಿಯಲ್ಲಿ ಭಾನುವಾರ ನಡೆಯಿತು. ಕರ್ನಾಟಕ ಮುಸ್ಲಿಂ ಜಮಾಅತ್ ರೆಂಜ ಸರ್ಕಲ್ ಇದರ ಅಧ್ಯಕ್ಷ ಅಬ್ದುಲ್‌ ಕುಂಣಿಖೆ…

ಸುಳ್ಯ: 10ನೇ ತರಗತಿ ವಿದ್ಯಾರ್ಥಿ ಕೌಶಿಕ್ ಬಾವಿಗೆ ಹಾರಿ ಆತ್ಮಹತ್ಯೆ..!!

ಸುಳ್ಯ ತಾಲೂಕು ಐವರ್ನಾಡು ರಬ್ಬರ್ ಫ್ಯಾಕ್ಟರಿ ಬಳಿ ಇಂದು ದುರ್ಘಟನೆ ಸಂಭವಿಸಿದೆ. ಮನೆ ಸಮೀಪದ ಸಾರ್ವಜನಿಕ ಬಾವಿಗೆ ಹಾರಿ ಕೌಶಿಕ್ ಕುಮಾರ್ (10ನೇ ತರಗತಿ ವಿದ್ಯಾರ್ಥಿ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಪೈಚಾರ್ ಮುಳುಗು ತಜ್ಞರಾದ ಅಬ್ಬಾಸ್ ಶಾಂತಿನಗರ,…

ನೂತನ ತಾಲೂಕು ಕ್ರೀಡಾಂಗಣ ಅಭಿವೃದ್ದಿಗೆ 9.50 ಕೋಟಿ ಮಂಜೂರು
ಶೀಘ್ರವೇ ಕ್ರೀಡಾಂಗಣ ಕಾಮಗಾರಿಗೆ ಚಾಲನೆ : ಶಾಸಕ ಅಶೋಕ್ ರೈ

ಪುತ್ತೂರು: ನರಿಮೊಗರು ,ಕೆಮ್ಮಿಂಜೆ ಗ್ರಾಮದ ಗಡಿಭಾಗವಾದ ಮುಂಡೂರಿನಲ್ಲಿ‌ನಿರ್ಮಢಣವಾಗಲಿರುವ ತಾಲೂಕು ಕ್ರೀಡಾಂಗಣ ಅಭಿವೃದ್ದಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ₹ 9.50 ಕೋಟಿ ಅನುದಾನ‌ಮಂಜೂರಾಗಿದೆ.ಮುಂಡೂರಿನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಕಾಯ್ದಿರಿಸಲಾಗಿರುವ ಜಾಗದಲ್ಲಿ ಈಗಾಗಲೇ ಒಂದು ಹಂತದ ಕಾಮಗಾರಿ ಪೂರ್ಣಗೊಂಡಿದೆ. ಉದ್ದೇಶಿತ ಜಾಗದಲ್ಲಿದ್ದ…

ಭಾರತದಲ್ಲಿ ₹10 – ಅಮೆರಿಕದಲ್ಲಿ ₹370! ಪಾರ್ಲೆ-ಜಿ ಬಿಸ್ಕತ್ ಬೆಲೆ ಗಗನಕ್ಕೇರಿದ ಕಾರಣವೇನು ಗೊತ್ತಾ..!!?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಆಮದು ಆಗುವ ವಸ್ತುಗಳ ಮೇಲಿನ ಸುಂಕವನ್ನು ಮತ್ತಷ್ಟು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಈಗಾಗಲೇ ಶೇ.25ರಷ್ಟು ಸುಂಕ ಜಾರಿಯಲ್ಲಿದ್ದು, ಅದನ್ನು ಶೇ.50ಕ್ಕೆ ಏರಿಸುವ ಯೋಜನೆ ಹೊರಬಿದ್ದಿದೆ. ಈಗಾಗಲೇ ಜಾರಿಯಲ್ಲಿರುವ ಶೇ.25ರಷ್ಟು ಸುಂಕದಿಂದಲೇ ಅಮೆರಿಕದಲ್ಲಿರುವ ಭಾರತೀಯರಿಗೆ ಬೆಲೆ ಏರಿಕೆ…

Join WhatsApp Group
error: Content is protected !!