




ದೇಶದಲ್ಲಿ ಹೆದ್ದಾರಿ ಟೋಲ್ ಕಟ್ಟಿ ಕಟ್ಟಿ ಬೇಸತ್ತಿದ್ದವರಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದೆ. ಅಡೆತಡೆಗಳಿಲ್ಲದ ಹೆದ್ದಾರಿ ಸಂಚಾರಕ್ಕಾಗಿ ಖಾಸಗಿ ವಾಹನಗಳಿಗೆ ವಾರ್ಷಿಕ ಪಾಸ್ ವಿತರಿಸುವ ಯೋಜನೆ ಜಾರಿಗೆ ಬರಲಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ
ಫಾಸ್ಟ್ ಟ್ಯಾಗ್ ಆಧರಿತ ವಾರ್ಷಿಕ ಪಾಸ್ ಜಾರಿಗೆ ತರಲು ಕೇಂದ್ರ ಸರ್ಕಾರದ ನಿರ್ಧಾರ ಮಾಡಿದ್ದು, ಆಗಸ್ಟ್ 15, 2025 ರಿಂದ ವಾರ್ಷಿಕ ಟೋಲ್ ಪಾಸ್ ನೀಡಲಾಗುತ್ತದೆ. ವಾರ್ಷಿಕ 3 ಸಾವಿರ ರೂಪಾಯಿಗೆ ಟೋಲ್ ಪಾಸ್ ಪಡೆದು ಒಂದು ವರ್ಷಗಳ ಕಾಲ ರಾಷ್ಟ್ರ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸಬಹುದು ಎಂದು ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಣೆ ಮಾಡಿದ್ದಾರೆ.
ಯಾವಾಗಿಂದ ಪಾಸ್ ವಿತರಣೆ..?
ಆಗಸ್ಟ್ 15, 2025 ರಿಂದ ವಾರ್ಷಿಕ ಟೋಲ್ ಪಾಸ್ ವಿತರಣೆ ಮಾಡಲಾಗುತ್ತದೆ. 3 ಸಾವಿರ ರೂಪಾಯಿಗೆ ಟೋಲ್ ಪಾಸ್ ಸಿಗುತ್ತೆ ಅದರ ವ್ಯಾಲಿಡಿಟಿ ಒಂದು ವರ್ಷ ಇರುತ್ತದೆ. ಒಂದು ವರ್ಷ ಬೇಡ ಎಂದರೆ 200 ಟ್ರಿಪ್ಗಳ ಪಾಸ್ ತೆಗೆದುಕೊಳ್ಳಬಹುದು. ಕಾರ್, ಜೀಪ್, ವ್ಯಾನ್ಗಳಿಗೆ ವಾರ್ಷಿಕ ಟೋಲ್ ಪಾಸ್ ಕೊಡ್ತಾರೆ. ಅಂದರೆ ನಾನ್ ಕಮರ್ಷಿಯಲ್ ವಾಹನಗಳಿಗೆ ಮಾತ್ರ ವಾರ್ಷಿಕ ಪಾಸ್ ಸಿಗುತ್ತದೆ.
ಕೇಂದ್ರ ಸಾರಿಗೆ ಇಲಾಖೆಯು ನಾನ್ ಕಮರ್ಷಿಯಲ್ ವಾಹನಗಳಿಗೆ ಮಾತ್ರವೇ ವಾರ್ಷಿಕ ಟೋಲ್ ಪಾಸ್ ನೀಡಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಕಾರು, ಜೀಪ್, ವ್ಯಾನ್ಗಳಿಗೆ ಟೋಲ್ ಪಾಸ್ ನೀಡಲಿದೆ.


