ಪುತ್ತೂರು :ನಗರದ ಇತಿಹಾಸ ಪ್ರಸಿದ್ಧ ಬದ್ರಿಯಾ ಜುಮ್ಮಾ ಮಸೀದಿಯ ಉರೂಸ್ ಕಮಿಟಿ ವತಿಯಿಂದ ಕರವಡ ವಲಿಯುಲ್ಲಾಹಿ ತಂಙಳ್ ರವರ ಉರೂಸ್ ಕಾರ್ಯಕ್ರಮ ಜ.9 ರಿಂದ 12 ರ ತನಕ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಉರೂಸ್ ಕಮಿಟಿ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಝಾಕ್ ತಿಳಿಸಿದ್ದಾರೆ.


ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಲವಾರು ಪವಾಡಗಳಿಂದ ಪ್ರಸಿದ್ಧವಾದ ಪುತ್ತೂರು ಕರವಡ ವಲಿಯುಲ್ಲಾಹಿ ತಂಙಳ್ ದರ್ಗಾಕ್ಕೆ ದೈನಂದಿನ ವಿಶೇಷ ಪ್ರಾರ್ಥನೆಗಾಗಿ ನೂರಾರು ಜನರು ಬರುತ್ತಿದ್ದು, ಈ ದರ್ಗಾವು ಪ್ರಸಿದ್ದ ಝಿಯಾರತ್ ಕೇಂದ್ರವಾಗಿ ಗುರುತಿಸಿ ಕೊಂಡಿದೆ.
ಕರ್ನಾಟಕ, ಕೇರಳದಲ್ಲಿ ಪ್ರಸಿದ್ಧಿ ವಡೆದಿರುವ ಪುತ್ತೂರು ಉರೂಸ್ ಕಾರ್ಯಕ್ರಮಕ್ಕೆ ಎಲ್ಲೆಡೆಯಿಂದ ಧರ್ಮಾಭಿಮಾನಿಗಳು ಬರುವುದು ವಾಡಿಕೆಯಾಗಿದೆ ಎಂದು ತಿಳಿಸಿದರು.
ಜ. 9 ರಂದು ಬೆಳಿಗ್ಗೆ ಗಂಟೆ 9.00ಕ್ಕೆ ಜಮಾಅತ್ ಸಮಿತಿಯ ಹಿರಿಯರಾದ ಕೆ. ಯೂಸುಫ್ ಹಾಜಿ ಬಪ್ಪಳಿಗೆ ಧ್ವಜಾರೋಹಣ ಮತ್ತು ಪುತ್ತೂರು ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪ್ರಾರ್ಥನೆ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಾಲ್ಕು ದಿನಗಳ ಕಾಲ ರಾತ್ರಿ ಪುಸಿದ್ದ ವಾಗ್ರಿಗಳ ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಉರೂಸ್ ಕಮಿಟಿಯ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ ವಹಿಸಲಿದ್ದು, ಪುಸಿದ್ದ ಉಲಮಾ ಸಂಘಟನೆಯ ಅಧ್ಯಕ್ಷ ಸಯ್ಯದುಲ್ ಉಲಮಾ ಸಯ್ಯದ್ ಜಿಫ್ರಿ ಮುತ್ತು ಕೊಯ ತಂಕಾಳ್ ಉದ್ಘಾಟಿಸಲಿದ್ದಾರೆ. ವಾಗ್ಮಿ ಅಸಫ್ ರಹ್ಮಾನಿ ಚೌಕಿ ಧಾರ್ಮಿಕ ಮತ ಪ್ರವಚನ ನೀಡುವರು. ಎರಡನೆಯ ದಿನ ವಾಗಿ ಖಲೀಲ್ ಹುದವಿ, ಮೂರನೆಯ ದಿನ ಅಬ್ದಲ್ ರಝಾಕ್ ಅಂಬಾರಿ ಪ್ರವಚನ ನಡೆಸುವರು. ಕಾರ್ಯಕ್ರಮದಲ್ಲಿ ಹಲವಾರು ಉನ್ನತ ಉಲಮಾ. ಸಾದಾತ್ ಗಳು ವಿವಿಧ ದಿನಗಳಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
ಜನವರಿ 12 ರಂದು ಕಉರೂಸಿನ ಸಮಾರೋಪ ಸಮಾರಂಭ ನಡೆಯಲಿದ್ದು, ಸಹಸ್ರಾರು ಜನರು ಭಾಗವಹಿಸುವರು. ಅಂದು ಪ್ರಖ್ಯಾತ ವಾಗ್ಮಿ ಸಿರಾಜುದ್ದೀನ್ ಖಾಸಿಮಿ ಮುಖ್ಯ ಪ್ರಭಾಷಣ ನಡೆಸುವರು. ಪುತ್ತೂರು ಅನಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಹಾಜಿ ಅಬ್ದುರ್ರಹ್ಮಾನ್ ಆಝಾದ್ ಅಧ್ಯಕ್ಷತೆ ವಹಿಸಲಿದ್ದು, ಹಲವಾರು ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಗಣ್ಯರು ಅತಿಥಿಗಳಾಗಿ ಭಾಗವಹಿಸುವರು. ಬಳಿಕ ಸಾರ್ವಜನಿಕ ಅನ್ನದಾನ ನಡೆಯುತ್ತದೆ
ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅನ್ಸಾರುದ್ದೀನ್ ಕಮಿಟಿ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಆಝಾದ್, ಉಪಾಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ, ಪ್ರಧಾನ ಕಾರ್ಯದರ್ಶಿ ಜುನೈದ್ ಸಾಲ್ಮರ, ಉರೂಸ್ ಕಮಿಟಿ ಪ್ರಧಾನ ಕಾರ್ಯದರ್ಶಿ ಹಸನ್ ಸಾಲ್ಮರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!